ADVERTISEMENT

ಕೃತಕ ಮೂಳೆ ಅಳವಡಿಕೆ: ಯಶಸ್ವಿ ಶಸ್ತ್ರಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2013, 19:59 IST
Last Updated 2 ಆಗಸ್ಟ್ 2013, 19:59 IST
ವಿಪರೀತ ಸೊಂಟ ನೋವಿನಿಂದ ಬಳಲುತ್ತಿದ್ದ ರಾಯಚೂರು ಜಿಲ್ಲೆಯ ಗುಂಡಮ್ಮ ಅವರು ಸಂಜಯಗಾಂಧಿ ಅಪಘಾತ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಕೃತಕ ಮೂಳೆಯ ಶಸ್ತ್ರಚಿಕಿತ್ಸೆ ಪಡೆದ ನಂತರ ಊರುಗೋಲಿನ ಸಹಾಯದಿಂದ ನಡೆದರು. ಮೂಳೆತಜ್ಞ ಡಾ.ವೈ.ಎಸ್.ಶಿವಕುಮಾರ್ ಇದ್ದಾರೆ
ವಿಪರೀತ ಸೊಂಟ ನೋವಿನಿಂದ ಬಳಲುತ್ತಿದ್ದ ರಾಯಚೂರು ಜಿಲ್ಲೆಯ ಗುಂಡಮ್ಮ ಅವರು ಸಂಜಯಗಾಂಧಿ ಅಪಘಾತ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಕೃತಕ ಮೂಳೆಯ ಶಸ್ತ್ರಚಿಕಿತ್ಸೆ ಪಡೆದ ನಂತರ ಊರುಗೋಲಿನ ಸಹಾಯದಿಂದ ನಡೆದರು. ಮೂಳೆತಜ್ಞ ಡಾ.ವೈ.ಎಸ್.ಶಿವಕುಮಾರ್ ಇದ್ದಾರೆ   

ಬೆಂಗಳೂರು: ವೃದ್ಧಾಪ್ಯದಲ್ಲೂ ಸವೆದಿರುವ ಸೊಂಟದ ಮೂಳೆಗಳನ್ನು ಸೀಮೇನೆಟ್ ಬಳಕೆ ಮಾಡದೇ ಇಂಪ್ಲ್ಯಾಂಟ್ ಕೃತಕ ಮೂಳೆಯನ್ನು ಅಳವಡಿಸುವ ಮೂಲಕ ಶಸ್ತ್ರಚಿಕಿತ್ಸೆ ಮಾಡುವಲ್ಲಿ ಸರ್ಕಾರಿ ಸ್ವಾಮ್ಯದ ಸಂಜಯಗಾಂಧಿ ಅಪಘಾತ ಮತ್ತು ಸಂಶೋಧನಾ ಸಂಸ್ಥೆಯ ತಜ್ಞರು ಯಶಸ್ವಿಯಾಗಿದ್ದಾರೆ.

ಸಾಮಾನ್ಯವಾಗಿ ವಯಸ್ಸಾದಂತೆ ಸೊಂಟದ ಮೂಳೆಗಳ ರಕ್ತ ಚಲನೆ ಕಡಿಮೆಯಾಗಿ ಮೂಳೆ ಸವೆಯಲು ಆರಂಭಿಸುತ್ತದೆ. ಆದರೆ ರಾಯಚೂರು ಜಿಲ್ಲೆಯ ಗುಂಡಮ್ಮ  (65) ಅವರ ಸೊಂಟದ ಕೀಲು ಮೂಳೆ ಸಂಪೂರ್ಣವಾಗಿ ಸವೆದಿತ್ತು. ಹೆಚ್ಚು ಸವೆದು ಕೀಲಿನ ಆಕಾರವೂ ಬದಲಾಗಿ ಹೋಗಿತ್ತು. ಈ ಮೂಳೆಯನ್ನು ಬದಲಾಯಿಸುವ ಮೂಲಕ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ಆಸ್ಪತ್ರೆಯ  ಮೂಳೆತಜ್ಞ ಡಾ.ವೈ.ಎಸ್.ಶಿವಕುಮಾರ್ `ಪ್ರಜಾವಾಣಿ'ಗೆ ತಿಳಿಸಿದರು.

`ಈ ಮೊದಲು ಸಾಮಾನ್ಯವಾಗಿ ಸೀಮೆನೆಟ್ (ಸಿಮೆಂಟ್ ಮಾದರಿಯ ಅಂಟು) ಬಳಸಿ ಮೂಳೆಯನ್ನು ಕೂಡಿಸುವ ವ್ಯವಸ್ಥೆಯಿತ್ತು. ಆದರೆ ಇದು ದೀರ್ಘಕಾಲ ಬರುವ ಸಾಧ್ಯತೆ ತೀರಾ ಕಡಿಮೆ ಇರುತ್ತದೆ. ಈಗ ಸೀಮೆನೆಟ್ ಇಲ್ಲದೇ ಇಂಪ್ಲ್ಯಾಟ್ ಮೂಳೆಯನ್ನು ಅಳವಡಿಸಿ ಶಸ್ತ್ರಚಿಕಿತ್ಸೆ ಮಾಡಲು ಸಾಧ್ಯವಿದೆ. ಇದರಿಂದ ಮೂಳೆಯೂ ಬೇಗನೇ ಕೂಡಿಕೊಳ್ಳುವುದು ಮಾತ್ರವಲ್ಲದೇ ದೀರ್ಘಕಾಲ ಯಾವುದೇ ತೊಂದರೆಯಿರುವುದಿಲ್ಲ' ಎಂದರು.
ಸಂಪರ್ಕಕ್ಕೆ: 9845371435, ಆಸ್ಪತ್ರೆ-  080-26564516.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.