ADVERTISEMENT

ಕೃತಿಗೆ ನ್ಯಾಷನಲ್ ಜಿಯೊಗ್ರಾಫಿಕ್ ಗರಿ

​ಪ್ರಜಾವಾಣಿ ವಾರ್ತೆ
Published 18 ಮೇ 2012, 19:40 IST
Last Updated 18 ಮೇ 2012, 19:40 IST

ಬೆಂಗಳೂರು: ರಾಜ್ಯದ ಉದಯೋನ್ಮುಖ ಜೀವ ವಿಜ್ಞಾನಿ ಹಾಗೂ ಶೋಧಕಿ ಕೃತಿ ಕಾರಂತ್ ಸೇರಿದಂತೆ ವಿಶ್ವದ 15 ಮಂದಿ ಯುವ ವಿಜ್ಞಾನಿಗಳು ಹಾಗೂ ಸಾಹಸಿಗರು 2012ನೇ ಸಾಲಿನ ಪ್ರತಿಷ್ಠಿತ ನ್ಯಾಷನಲ್ ಜಿಯೊಗ್ರಾಫಿಕ್ ಸೊಸೈಟಿಯ ವಿಶೇಷ ಗೌರವಕ್ಕೆ ಪಾತ್ರರಾಗಿದ್ದಾರೆ.

ನ್ಯಾಷನಲ್ ಜಿಯೊಗ್ರಾಫಿಕ್ ಎಮರ್ಜಿಂಗ್ ಎಕ್ಸ್‌ಪ್ಲೋರರ್ಸ್‌ ಕಾರ್ಯಕ್ರಮದಡಿ ಆಯಾ ಕ್ಷೇತ್ರದಲ್ಲಿ ಸಲ್ಲಿಸಿದ ಅಸಾಧಾರಣ ಸೇವೆಯನ್ನು ಗುರುತಿಸಿ ಸೊಸೈಟಿಯು ಈ ಗೌರವ ನೀಡಿದೆ. ರಾಜ್ಯದ ವನ್ಯಜೀವಿ ಅಧ್ಯಯನ ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕಿಯಾಗಿರುವ ಕೃತಿ ಕಾರಂತ್ ಅವರಿಗೆ ತಮ್ಮ ಕ್ಷೇತ್ರದಲ್ಲಿ ಸಂಶೋಧನಾ ಚಟುವಟಿಕೆಗಳನ್ನು ಮುಂದುವರಿಸಲು ಸೊಸೈಟಿಯು 10 ಸಾವಿರ ಡಾಲರ್ (5.4 ಲಕ್ಷ ರೂಪಾಯಿ) ನೆರವು ನೀಡಲಿದೆ.

ಎಲ್ಲ 15 ಮಂದಿಗೂ ತಮ್ಮ ಕ್ಷೇತ್ರದಲ್ಲಿ ಸಂಶೋಧನೆ ನಡೆಸಲು ತಲಾ 10 ಸಾವಿರ ಡಾಲರ್  ನೀಡಲಾಗುತ್ತದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.