ADVERTISEMENT

ಕೆ.ಆರ್‌. ನಗರ ಯೋಧ ಉಗ್ರರ ಗುಂಡಿಗೆ ಬಲಿ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2014, 19:30 IST
Last Updated 11 ಮಾರ್ಚ್ 2014, 19:30 IST

ಕೆ.ಆರ್. ನಗರ: ಮೈಸೂರು ಜಿಲ್ಲೆ ಕೆ.ಆರ್. ನಗರ ತಾಲ್ಲೂಕಿನ ಬಡಕನಕೊಪ್ಪಲು ನಿವಾಸಿ ಕಾಂತರಾಜು ಮತ್ತು ಧನಲಕ್ಷ್ಮೀ ಅವರ ಪುತ್ರ ಯೋಧ ಸುನೀಲ್ (22) ಜಮ್ಮು–ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಗೆ ಬಲಿಯಾಗಿದ್ದಾರೆ. ಸುನೀಲ್ ಮೂರು ವರ್ಷಗಳ ಹಿಂದೆ ಸೇನೆ ಸೇರಿದ್ದರು.

ಅವರಿಗೆ ಇಬ್ಬರು ಸಹೋದರಿಯರು ಮತ್ತು ಸಹೋದರ ಇದ್ದಾರೆ. ಯೋಧ ಸುನೀಲ್ ಕಳೇಬರವನ್ನು ವಿಮಾನದ ಮೂಲಕ ಬೆಂಗಳೂರು ಮಾರ್ಗವಾಗಿ ಸ್ವಗ್ರಾಮಕ್ಕೆ ತರಲಾಗುವುದು ಎಂದು ಸೇನಾ ಕಚೇರಿಯ ಸಿಬ್ಬಂದಿ ದೂರವಾಣಿ ಮೂಲಕ ಕುಟುಂಬದ ಸದಸ್ಯರಿಗೆ ತಿಳಿಸಿದ್ದಾರೆ.

ಆದರೆ, ತೀವ್ರ ಹಿಮಪಾತದ ಕಾರಣ ವಿಮಾನ ಸಂಚಾರ ರದ್ದುಗೊಂಡಿ­ರುವುದರಿಂದ ಮೃತದೇಹ ತರುವಲ್ಲಿ ವಿಳಂಬವಾಗುವ ಸಾಧ್ಯತೆ ಇದೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.