ADVERTISEMENT

‘ಕೆಎಂಎಫ್‌ನಲ್ಲಿ ಅಕ್ರಮ ವೇತನ ಪರಿಷ್ಕರಣೆ’

​ಪ್ರಜಾವಾಣಿ ವಾರ್ತೆ
Published 18 ಜನವರಿ 2019, 19:14 IST
Last Updated 18 ಜನವರಿ 2019, 19:14 IST

ಬೆಂಗಳೂರು:ಕರ್ನಾಟಕ ಹಾಲು ಮಹಾಮಂಡಳಿಯ (ಕೆಎಂಎಫ್) ಕೆಲ ನಿರ್ದೇಶಕರು ಸಹಕಾರ ಇಲಾಖೆಯ ಗಮನಕ್ಕೆ ತರದೆ, ನೌಕರರ ಮೂಲವೇತನವನ್ನು ಅಕ್ರಮವಾಗಿ ಹೆಚ್ಚಳ ಮಾಡಿದ್ದಾರೆ ಎಂದು ಸಾಮಾಜಿಕ ಹೋರಾಟಗಾರಸಮೀರ್‌ ಪಾಷಾ ಆರೋಪಿಸಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಹಕಾರ ಸಚಿವರ ಅನುಮತಿ ಇಲ್ಲದಿದ್ದರೂ ವೇತನ ಪರಿಷ್ಕರಣೆ ಮಾಡಲಾಗಿದೆ. ಕೆಲ ನಿರ್ದೇಶಕರುವೇತನ ಪರಿಷ್ಕರಿಸುವುದಾಗಿ 320 ಸಿಬ್ಬಂದಿಯಿಂದ ತಲಾ ₹50,000 ಹಣ ವಸೂಲಿ ಮಾಡಿದ್ದಾರೆ’ ಎಂದು ಅವರು ದೂರಿದರು.

‘ವೇತನ ಪರಿಷ್ಕರಣೆಯಿಂದ ಇಲಾಖೆಗೆ ನಷ್ಟ ಉಂಟಾಗಿದೆ. ಅದಕ್ಕಾಗಿಪಶು ಆಹಾರ ದರವನ್ನು ಹೆಚ್ಚಿಸುವ ಮೂಲಕ ಅದರ ಹೊರೆಯನ್ನು ಅನ್ನದಾತರ ಮೇಲೆ ವರ್ಗಾಯಿಸಿದ್ದಾರೆ. ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.