ಬೆಂಗಳೂರು: 2011ರ ಸಾಲಿನ ಗೆಜೆಟೆಡ್ ಅಧಿಕಾರಿಗಳ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕರ್ನಾಟಕ ಲೋಕಸೇವಾ ಆಯೋಗ ಪ್ರಕಟಿಸಿದ ತಾತ್ಕಾಲಿಕ ಪಟ್ಟಿಯ ಪ್ರಕಾರ ಐವರು ಪರಿಶಿಷ್ಟರಿಗೆ ಮಾತ್ರ ಲಾಭವಾಗಿದೆ.
ಸಾಮಾನ್ಯ ವರ್ಗದ ಕೋಟಾದಡಿ ಪರಿಶಿಷ್ಟ ಜಾತಿಯ ಇಬ್ಬರು ಕಂದಾಯ ಉಪ ವಿಭಾಗಾಧಿಕಾರಿಗಳಾಗಿ, ಒಬ್ಬರು ವಾಣಿಜ್ಯ ತೆರಿಗೆ ಉಪ ಆಯುಕ್ತರಾಗಿ, ಇನ್ನೊಬ್ಬರು ತಹಶೀಲ್ದಾರ್ ಆಗಿ ಆಯ್ಕೆಯಾಗಿದ್ದಾರೆ. ಪರಿಶಿಷ್ಟ ವರ್ಗದ ಒಬ್ಬರು ಸಾಮಾನ್ಯ ವರ್ಗದ ಕೋಟಾದಲ್ಲಿ ತಹಶೀಲ್ದಾರ್ ಆಗಿದ್ದಾರೆ.
ಅದೇ ರೀತಿ ಒಕ್ಕಲಿಗ, ರೆಡ್ಡಿ ಮುಂತಾದ ಜನಾಂಗಗಳು ಇರುವ 3 ಎ ಪ್ರವರ್ಗದ 23 ಅಭ್ಯರ್ಥಿಗಳು ಸಾಮಾನ್ಯ ವರ್ಗದ ಕೋಟಾದಲ್ಲಿ ಆಯ್ಕೆಯಾಗಿದ್ದಾರೆ. ಲಿಂಗಾಯತ ಉಪ ಪಂಗಡಗಳು ಇರುವ 3 ಬಿ ಪ್ರವರ್ಗದ 19 ಅಭ್ಯರ್ಥಿಗಳು, ಕುರುಬ, ಈಡಿಗ ಮತ್ತು ಇತರ ಜನಾಂಗದವರು ಇರುವ 2 ಎ ಪ್ರವರ್ಗದ 13 ಅಭ್ಯರ್ಥಿಗಳು, ಗೊಲ್ಲ, ಉಪ್ಪಾರ, ಬೆಸ್ತ ಮುಂತಾದ ಜನಾಂಗದವರು ಇರುವ ಕೆಟಗರಿ–1 ಪ್ರವರ್ಗದ 9 ಅಭ್ಯರ್ಥಿಗಳು ಸಾಮಾನ್ಯ ವರ್ಗದ ಕೋಟಾದಲ್ಲಿ ಆಯ್ಕೆಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.