ADVERTISEMENT

ಕೇಜ್ರಿವಾಲ್ ಹುಚ್ಚ: ಮೊಯಿಲಿ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2014, 19:30 IST
Last Updated 15 ಫೆಬ್ರುವರಿ 2014, 19:30 IST
ಕೇಜ್ರಿವಾಲ್ ಹುಚ್ಚ: ಮೊಯಿಲಿ
ಕೇಜ್ರಿವಾಲ್ ಹುಚ್ಚ: ಮೊಯಿಲಿ   

ಚಿಕ್ಕಬಳ್ಳಾಪುರ: ಅರವಿಂದ್ ಕೇಜ್ರಿವಾಲ್‌ ಅವರಂಥ ಹುಚ್ಚ ಮತ್ತು ಅಪ್ರಬುದ್ಧ ರಾಜಕಾರಣಿಯನ್ನು ಜೀವನದಲ್ಲಿಯೇ ಕಂಡಿಲ್ಲ. ಕೇವಲ ಅರಾಜಕತೆಯ ವಾತಾವರಣ ಸೃಷ್ಟಿಸುತ್ತಾರೆಯೇ ಹೊರತು ರಾಜಕೀಯ ಮಾಡಲು ಬರು ವುದಿಲ್ಲ ಎಂದು ಕೇಂದ್ರ ಇಂಧನ ಸಚಿವ ವೀರಪ್ಪ ಮೊಯಿಲಿ ವ್ಯಂಗ್ಯವಾಡಿದರು.

ನಗರದಲ್ಲಿ ಶನಿವಾರ ಕಾರ್ಯಕ್ರಮ ವೊಂದರಲ್ಲಿ ಪಾಲ್ಗೊಂಡ ನಂತರ ಸುದ್ದಿ ಗಾರರ ಜತೆ ಮಾತನಾಡಿ, ತುಘಲಕ್‌ ಜೊತೆಗೂ ಕೇಜ್ರಿವಾಲ್‌ರನ್ನು ಹೋಲಿಕೆ ಮಾಡಲು ಆಗುವುದಿಲ್ಲ. ತುಘಲಕ್‌ ಕೊಂಚ ಬುದ್ಧಿವಂತನಾಗಿದ್ದ ಮತ್ತು ರಾಜಕಾರಣ ಗೊತ್ತಿತ್ತು ಎಂದರು.

ಉತ್ತಮ ಆಡಳಿತ ನೀಡಲಿ ಎಂಬ ಉದ್ದೇಶದಿಂದ ಸರ್ಕಾರ ರಚನೆಗೆ ಕಾಂಗ್ರೆಸ್‌ ಬೆಂಬಲ ಕೊಟ್ಟಿತ್ತು. ಆದರೆ ಅದನ್ನು ಉಳಿಸಿ­ಕೊಳ್ಳುವಲ್ಲಿ ವಿಫಲ ರಾಗಿ­ದ್ದಾರೆ. ಪ್ರಜಾ­ಪ್ರಭುತ್ವ ವ್ಯವಸ್ಥೆ ಯನ್ನೇ ಶಿಥಿಲ­ಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಖಾರವಾಗಿ ಹೇಳಿದರು.

ರಿಲಯನ್ಸ್ ಸಂಸ್ಥೆ ಉದ್ಯಮಿ ಮುಖೇಶ್‌ ಅಂಬಾನಿ ಕಾಂಗ್ರೆಸ್‌ಗೆ ನೆರ­ವಾ­ಗುತ್ತಿರುವ ಮತ್ತು ತಾವೇ ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಎಲ್ಲವೂ ಕೇಜ್ರಿವಾಲ್‌ ಅವರನ್ನೇ ಕೇಳಬೇಕು. ಅವರಿಗೆ ಎಲ್ಲವೂ ಗೊತ್ತಿದ್ದಂತೆ ವರ್ತಿಸುತ್ತಿದ್ದಾರೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.