ADVERTISEMENT

ಕೊಲ್ಲೂರಿನಲ್ಲಿ ಇಳೆಯರಾಜ ಜನ್ಮದಿನ ಆಚರಣೆ

​ಪ್ರಜಾವಾಣಿ ವಾರ್ತೆ
Published 8 ಜೂನ್ 2013, 20:22 IST
Last Updated 8 ಜೂನ್ 2013, 20:22 IST
ಸಂಗೀತ ನಿರ್ದೇಶಕ ಇಳಯರಾಜ ಅವರು ಕೊಲ್ಲೂರಿನಲ್ಲಿ ಶನಿವಾರ ಗೋಪೂಜೆ ನಡೆಸಿದರು
ಸಂಗೀತ ನಿರ್ದೇಶಕ ಇಳಯರಾಜ ಅವರು ಕೊಲ್ಲೂರಿನಲ್ಲಿ ಶನಿವಾರ ಗೋಪೂಜೆ ನಡೆಸಿದರು   

ಕೊಲ್ಲೂರು: ದಕ್ಷಿಣ ಭಾರತದ ಪ್ರಸಿದ್ಧ ಸಂಗೀತ ನಿರ್ದೇಶಕ ಇಳೆಯರಾಜ ಅವರು ತಮ್ಮ 70ನೇ ಜನ್ಮದಿನ ನಿಮಿತ್ತ ಶನಿವಾರ ತಮ್ಮ ಕುಟುಂಬದ ಸದಸ್ಯರ ಜತೆ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಬಂದು ದೇವಿಯ ದರ್ಶನ ಪಡೆದರು.

ಈ ಸಂದರ್ಭದಲ್ಲಿ ಅವರು ದೇವಿಯ ಸನ್ನಿಧಿಯಲ್ಲಿ ಭೀಮರಥಿ ಶಾಂತಿ ಹೋಮ ಕೈಗೊಂಡರಲ್ಲದೆ, ಚಂಡಿಕಾ ಯಾಗ, ಗೋಪೂಜೆ ನಡೆಸಿ, ಗೋದಾನ ಮಾಡಿದರು . ಕ್ಷೇತ್ರ ಪುರೋಹಿತ ಕೆ. ಶ್ರೀಧರ ಅಡಿಗ ಅವರ ನೇತೃತ್ವದಲ್ಲಿ ಎಲ್ಲ ವಿಧಿಗಳು ನೆರವೇರಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.