ಹುಬ್ಬಳ್ಳಿ: ಇಲ್ಲಿಯ ಕೆಎಲ್‌ಇ ಸೊಸೈಟಿಯ ಬಿಬಿಎ ಕಾಲೇಜಿನ ನೇತೃತ್ವದಲ್ಲಿ ಮಂಗಳವಾರ ಮುಕ್ತಾಯಗೊಂಡ ಎರಡು ದಿನಗಳ ರಾಷ್ಟೀಯ ರಸಪ್ರಶ್ನೆ ಸ್ಪರ್ಧೆ `ಅವೆಂಚುರಾ-2012~ರಲ್ಲಿ ಬೆಂಗಳೂರಿನ ಕ್ರೈಸ್ಟ್ ಬಿಬಿಎ ಕಾಲೇಜಿನ `ಕ್ಯಾಪ್‌ಕಾಂ~ ತಂಡ ಮೊದಲ ಬಹುಮಾನ ಗೆದ್ದುಕೊಂಡಿದೆ.
ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ 17 ಕಾಲೇಜುಗಳ, ತಲಾ ಐದು ಸದಸ್ಯರನ್ನೊಳಗೊಂಡ ತಂಡಗಳು ಭಾಗವಹಿಸಿದ್ದ ಈ ಸ್ಪರ್ಧೆಯಲ್ಲಿ ಬೆಳಗಾವಿಯ ಲಿಂಗರಾಜ ಕಾಲೇಜಿನ `ಫೈರ್‌ಮಿಂಟ್~ ಹೆಸರಿನ ತಂಡ ಎರಡನೇ ಬಹುಮಾನ ಪಡೆಯಿತು. ಗೋವಾದ ಡಾನ್‌ಬಾಸ್ಕೋ ಬಿಬಿಎ ಕಾಲೇಜಿನ `ಜಾಪ್ಟೊಲ್ಯಾಬ್~ ತಂಡ ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.
ಪ್ರಥಮ ಬಹುಮಾನ 15 ಸಾವಿರ ರೂಪಾಯಿ ನಗದು, ಎರಡು ಬ್ಲ್ಯಾಕ್‌ಬೆರಿ ಟ್ಯಾಬ್ಲೆಟ್, ಟ್ರೋಫಿ ಮತ್ತು ಪ್ರಮಾಣಪತ್ರ ಒಳಗೊಂಡಿದೆ. ದ್ವಿತೀಯ ಬಹುಮಾನ ಟಚ್‌ಸ್ಕ್ರೀನ್ ಡಿವಿಡಿ ಪ್ಲೇಯರ್ ಒಳಗೊಂಡಿತ್ತು. ಟ್ರೋಫಿ ಮತ್ತು ಪ್ರಮಾಣಪತ್ರವನ್ನು ತೃತೀಯ ಬಹುಮಾನವನ್ನಾಗಿ ನೀಡಲಾಯಿತು. ಮುಖ್ಯ ಅತಿಥಿಯಾಗಿ ಅಗಮಿಸಿದ್ದ ಇಂಡಿಯನ್ ಆಯಿಲ್ ಕಾರ್ಪೊರೇಷನ್‌ನ (ಐಓಸಿ) ನಿವೃತ್ತ ಮುಖ್ಯ ಕಾರ್ಯಾಚರಣೆ ವ್ಯವಸ್ಥಾಪಕ ಐ.ಆರ್.ಪಾಟೀಲ ಪ್ರಶಸ್ತಿ ವಿತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.