ADVERTISEMENT

ಖಾದ್ರಿ ಅಚ್ಯುತನ್‌ಗೆ ಪಾ.ಪು ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 21 ಜನವರಿ 2014, 19:30 IST
Last Updated 21 ಜನವರಿ 2014, 19:30 IST
ಖಾದ್ರಿ ಅಚ್ಯುತನ್‌ಗೆ ಪಾ.ಪು ಪ್ರಶಸ್ತಿ
ಖಾದ್ರಿ ಅಚ್ಯುತನ್‌ಗೆ ಪಾ.ಪು ಪ್ರಶಸ್ತಿ   

ಧಾರವಾಡ: ಪತ್ರಿಕೋದ್ಯಮ ಮತ್ತು ವಿದ್ಯುನ್ಮಾನ ಮಾಧ್ಯಮ ಕ್ಷೇತ್ರಗಳಲ್ಲಿ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಸಕ್ರಿಯವಾಗಿ ಕಾರ್ಯ ನಿರ್ವಹಿಸಿ, ತಮ್ಮದೇ ಆದ ಛಾಪು ಮೂಡಿಸಿದ ಖಾದ್ರಿ ಅಚ್ಯುತನ್ ಅವರಿಗೆ 2013ನೇ ಸಾಲಿನ ಡಾ.ಪಾಟೀಲ ಪುಟ್ಟಪ್ಪ ಪುರಸ್ಕಾರ ಸಂದಿದೆ.

ಹುಬ್ಬಳ್ಳಿಯ ‘ಪಾಟೀಲ ಪುಟ್ಟಪ್ಪ ವಿಚಾರ ವೇದಿಕೆ’ ನೀಡುವ ಈ ಪ್ರಶಸ್ತಿಯು ಸ್ಮರಣಿಕೆ, ಪ್ರಮಾಣಪತ್ರ­ವನ್ನು ಒಳಗೊಂಡಿದೆ. ಇದೇ ಬುಧವಾರ
(ಜ.22ರಂದು) ನಡೆಯುವ  ಪಾಟೀಲ ಪುಟ್ಟಪ್ಪ ಅವರ 94ನೇ ಜನ್ಮ ದಿನಾ­ಚರಣೆ ಕಾರ್ಯಕ್ರಮದಲ್ಲಿ ಅಚ್ಯುತನ್‌ ಅವರಿಗೆ ಈ ಪುರಸ್ಕಾರ ನೀಡ­ಲಾಗುವುದು ಎಂದು ವೇದಿಕೆ ಅಧ್ಯಕ್ಷ ನಿರಂಜನ ವಾಲಿಶೆಟ್ಟರ ತಿಳಿಸಿದ್ದಾರೆ.

ಅಚ್ಯುತನ್‌ ಧಾರವಾಡ ಆಕಾಶವಾಣಿ­ಯಲ್ಲಿ ಸಹಾಯಕ ಸುದ್ದಿ ಸಂಪಾದಕ­ರಾಗಿ, 1984ರಲ್ಲಿ ಅಂಡ­ಮಾನ್ ನಿಕೋ­ಬಾರ್ ದ್ವೀಪದಲ್ಲಿ ಆಕಾಶ­ವಾಣಿಯ ಸಹಾಯಕ ಸಂಪಾದಕರಾಗಿ, ಬೆಂಗ­ಳೂರು ದೂರದರ್ಶನದ ಡಿಡಿ 9, ಚಂದನ, ಡಿಡಿ 1 ವಾಹಿನಿಯ ಸುದ್ದಿ ವಿಭಾಗದಲ್ಲಿ ಕಾರ್ಯನಿರ್ವ­ಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.