ADVERTISEMENT

ಗಡಿನಾಡಲ್ಲಿ ಕನ್ನಡಿಗನಿಗೆ ಮೇಯರ್‌ ಪಟ್ಟ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2018, 19:30 IST
Last Updated 1 ಮಾರ್ಚ್ 2018, 19:30 IST
ಬೆಳಗಾವಿ ಮಹಾನಗರ ಪಾಲಿಕೆ ಮೇಯರ್ ಆಗಿ ಆಯ್ಕೆಯಾದ ಕನ್ನಡ ಭಾಷಿಕ ಸದಸ್ಯ ಬಸಪ್ಪ ಸಿದ್ದಪ್ಪ ಚಿಕ್ಕಲದಿನ್ನಿ, ಎಂಇಎಸ್‌ ಬೆಂಬಲಿತ ಉಪ ಮೇಯರ್‌ ಮಧುಶ್ರೀ ಪೂಜಾರಿ ವಿಜಯದ ನಗೆ ಬೀರಿದ್ದು ಹೀಗೆ
ಬೆಳಗಾವಿ ಮಹಾನಗರ ಪಾಲಿಕೆ ಮೇಯರ್ ಆಗಿ ಆಯ್ಕೆಯಾದ ಕನ್ನಡ ಭಾಷಿಕ ಸದಸ್ಯ ಬಸಪ್ಪ ಸಿದ್ದಪ್ಪ ಚಿಕ್ಕಲದಿನ್ನಿ, ಎಂಇಎಸ್‌ ಬೆಂಬಲಿತ ಉಪ ಮೇಯರ್‌ ಮಧುಶ್ರೀ ಪೂಜಾರಿ ವಿಜಯದ ನಗೆ ಬೀರಿದ್ದು ಹೀಗೆ   

ಬೆಳಗಾವಿ:‌ ಇಲ್ಲಿನ ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ಕನ್ನಡ ಭಾಷಿಕ ಸದಸ್ಯ ಬಸಪ್ಪ ಸಿದ್ದಪ್ಪ ಚಿಕ್ಕಲದಿನ್ನಿ ಅವಿರೋಧವಾಗಿ ಆಯ್ಕೆಯಾದರು. ಎಂಟು ವರ್ಷಗಳ ಬಳಿಕ ಈ ಹುದ್ದೆಗೇರಿದ ಕನ್ನಡ ಬಣದ ಐದನೇ ಸದಸ್ಯರೆಂಬ ಕೀರ್ತಿಗೆ ಭಾಜನರಾದರು.

ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ಬೆಂಬಲಿತ ಸದಸ್ಯೆ ಮಧುಶ್ರೀ ಪೂಜಾರಿ ಉಪ ಮೇಯರ್ ಪಟ್ಟ ಅಲಂಕರಿಸಿದರು.

ಗುರುವಾರ ನಡೆದ ಚುನಾವಣೆಯಲ್ಲಿ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದ ಮೇಯರ್‌ ಸ್ಥಾನಕ್ಕೆ 55ನೇ ವಾರ್ಡ್‌ ಸದಸ್ಯ ಬಸಪ್ಪ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು. ಚುನಾವಣಾ ಅಧಿಕಾರಿಯಾಗಿದ್ದ ಪ್ರಾದೇಶಿಕ ಆಯುಕ್ತ ಪಿ.ಎ.ಮೇಘಣ್ಣವರ ನೂತನ ಮೇಯರ್ ಆಯ್ಕೆಯನ್ನು ಘೋಷಿಸಿದರು.

ADVERTISEMENT

ಎಂಇಎಸ್‌ ಗುಂಪಿನಲ್ಲಿ ಪರಿಶಿಷ್ಟ ಪಂಗಡದ ಸದಸ್ಯರು ಯಾರೂ ಇರಲಿಲ್ಲ. ಹೀಗಾಗಿ, ಎಂಇಎಸ್‌ಗೆ ಬಹುಮತ ಇದ್ದರೂ ಪ್ರತಿಪಕ್ಷ ಸ್ಥಾನದಲ್ಲಿ ಕೂರಬೇಕಾಗಿದೆ. ಮೇಯರ್‌ ಹುದ್ದೆ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದೂ ಇದೇ ಮೊದಲು.

ಪಕ್ಷಗಳ ಸದಸ್ಯರಿಲ್ಲ:

ಪಾಲಿಕೆಯ ಎಲ್ಲ 58 ಸದಸ್ಯರೂ ಪಕ್ಷೇತರರೇ. ರಾಜಕೀಯ ಪಕ್ಷಗಳ ಹೆಸರಿನಲ್ಲಿ ಯಾರೂ ಕಣಕ್ಕೆ ಇಳಿಯುವುದಿಲ್ಲ. ಎಂಇಎಸ್‌ ಹಾಗೂ ಕನ್ನಡ– ಉರ್ದು ಭಾಷಿಕರ ಹೆಸರಿನಲ್ಲಿ ಎರಡೂ ಕಡೆಯವರು ಚುನಾವಣೆಗೆ ಸ್ಪರ್ಧಿಸುತ್ತಾರೆ. ನೂತನ ಮೇಯರ್‌ ಬಸಪ್ಪ, ಶಾಸಕ ಸತೀಶ ಜಾರಕಿಹೊಳಿ ಹಾಗೂ ರಮೇಶ ಜಾರಕಿಹೊಳಿ ಬೆಂಬಲಿಗರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.