ADVERTISEMENT

ಗಣಿ ಅಕ್ರಮ: 29 ಸಿಬ್ಬಂದಿ ಅಮಾನತು

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2011, 19:30 IST
Last Updated 24 ಸೆಪ್ಟೆಂಬರ್ 2011, 19:30 IST

ಬಳ್ಳಾರಿ: ಜಿಲ್ಲೆಯಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆ ಕುರಿತು ತನಿಖೆ ನಡೆಸಿ, ಲೋಕಾಯುಕ್ತರು ಸಲ್ಲಿಸಿರುವ ವರದಿ ಅನ್ವಯ ಅರಣ್ಯ ಇಲಾಖೆಯ ಈ ಕೆಳಕಂಡ 29 ಸಿಬ್ಬಂದಿಯನ್ನು ಶುಕ್ರವಾರ ಅಮಾನತಿನಲ್ಲಿ ಇರಿಸಿ ಆದೇಶ ಹೊರಡಿಸಲಾಗಿದೆ.

ವಲಯ ಅರಣ್ಯಾಧಿಕಾರಿಗಳಾದ ಮಹೇಶ ಪಾಟೀಲ, ವಿ.ಕೆ. ತಿಪ್ಪೇ ಸ್ವಾಮಿ, ಎಂ.ಎಸ್.ನ್ಯಾಮತಿ ಹಾಗೂ ರಾಮಮೂರ್ತಿ, ಮೋಜಣಿದಾರ ದರಪ್ಪ ನಾಯಕ್, ವನಪಾಲಕರಾ ಗಿರುವ ಕೆ.ಗಂಗೇಗೌಡ, ಬಳ್ಳಾರಿ ರಾಘ ವೇಂದ್ರ, ಕೆ.ಸಿ. ನಾಗರಾಜಯ್ಯ, ಎನ್. ಬಸವರಾಜ್, ಕೆ.ಆರ್. ಚೇತನ್, ಕೆ.ಗಂಟಿ ರಾಜೇಶ್, ಸೈಯದ್ ಷರೀಫ್, ಬಿ.ಶೇಖರ್, ಬಸವನಗೌಡ, ಬಿ. ನಾಗರಾಜ್, ಟಿ.ಕೆ. ಚಂದ್ರಪ್ಪ, ಸಂಜೀವ ಕುಮಾರ ಅಗಸರ,

ಸುನಿಲ್‌ಕುಮಾರ್ ಚೌಹಾಣ್, ವಿ. ತಿಮ್ಮ ರಾಜು, ಜೆ.ಹನುಮಂತಪ್ಪ, ವನಪಾಲಕರಾದ ಕೆ.ಎಂ. ಮಧುಸೂದನ, ಎಂ.ಹೊನ್ನುರಸಾಬ್, ವಿ. ನಾಗ ಭೂಷಣ, ಬಿ.ರಂಗಯ್ಯ, ಕೆ.ಕೆಂಚಪ್ಪ, ಡಿ. ಮಾರಣ್ಣ, ಕನಕಪ್ಪ, ಕೆ.ಜಡಿಯಪ್ಪ ಮತ್ತು ನಾಗೇಂದ್ರಪ್ಪ. ಅರಣ್ಯಾಧಿಕಾರಿ ಡಾ.ಯು.ವಿ. ಸಿಂಗ್ ನೇತೃತ್ವದ ಲೋಕಾಯುಕ್ತ ತಂಡ, ಜಿಲ್ಲೆಯಲ್ಲಿ ತನಿಖೆ ನಡೆಸಿ ವರದಿ ಸಲ್ಲಿಸಿದ್ದು,
 
ಈ ಸಿಬ್ಬಂದಿಯು ಅಪ್ರಾಮಾಣಿಕವಾಗಿ ವರ್ತಿಸಿದ್ದಲ್ಲದೆ, ಕರ್ತ ವ್ಯಲೋಪ ಎಸಗಿ, ಆಡಳಿತಾತ್ಮಕ ಕರ್ತವ್ಯ ನಿರ್ವಹಣೆಯಲ್ಲಿ ಸದ್ವಿವೇಚನೆಗೆ ವ್ಯತಿರಿಕ್ತವಾಗಿ ವರ್ತಿಸಿ, ಸರ್ಕಾರಕ್ಕೆ ಆರ್ಥಿಕ ನಷ್ಟ ಉಂಟಾ ಗಲು ಕಾರಣರಾಗಿರುವುದು ಮೇಲ್ನೋಟಕ್ಕೆ ಸಾಬೀತಾದ ಹಿನ್ನೆಲೆ ಯಲ್ಲಿ ಶಿಸ್ತು ಕ್ರಮ ಜರುಗಿಸಲಾಗಿದೆ ಎಂದು ತಿಳಿಸಲಾಗಿದೆ.

ಅಲ್ಲದೆ, ಅಮಾನತಿನ ಅವಧಿಯಲ್ಲಿ ಸಕ್ರಮ ಪ್ರಾಧಿಕಾರದ ಪೂರ್ವಾನು ಮತಿ ಇಲ್ಲದೆ  ಕೇಂದ್ರ ಸ್ಥಾನಗಳಿಂದ ಬೇರೆಡೆಗೆ ಹೋಗಕೂಡದು ಎಂದು ಅಮಾನತು ಆದೇಶ ಹೊರಡಿಸಿರುವ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾ ಧಿಕಾರಿ ಇಂದೂ ಬಿ.ಶ್ರೀವಾಸ್ತವ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.