ADVERTISEMENT

ಗಣಿ ಅಕ್ರಮ: 63 ಮಂದಿಗೆ ನೋಟಿಸ್

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2011, 19:30 IST
Last Updated 1 ಅಕ್ಟೋಬರ್ 2011, 19:30 IST

ಬೆಂಗಳೂರು: ಅಕ್ರಮ ಗಣಿಗಾರಿಕೆಯಲ್ಲಿ ಷಾಮೀಲಾಗಿದ್ದ ಆರೋಪದ ಮೇಲೆ ಆರು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು (ಆರ್‌ಟಿಓ), 54 ಮೋಟಾರು ವಾಹನ ನಿರೀಕ್ಷಕರು ಮತ್ತು ಮೂವರು ಚಾಲಕರಿಗೆ ಸಾರಿಗೆ ಇಲಾಖೆ ನೋಟಿಸ್ ಜಾರಿ ಮಾಡಿದೆ. ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಲೋಕಾಯುಕ್ತ ತನಿಖಾ ವರದಿ ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದೆ.

ಅಕ್ರಮ ಗಣಿಗಾರಿಕೆ ನಡೆಸುವವರ ಜೊತೆ ನೇರವಾಗಿ ಷಾಮೀಲಾಗಿರುವುದು, ಅಕ್ರಮಕ್ಕೆ ಸಹಕಾರ ನೀಡಿರುವುದು, ಲಂಚ ಪಡೆದಿರುವುದು ಮತ್ತಿತರ ಆರೋಪಗಳಿಗೆ ಸಂಬಂಧಿಸಿದಂತೆ ಈ ಅಧಿಕಾರಿಗಳು ಮತ್ತು ಚಾಲಕರಿಗೆ ನೋಟಿಸ್ ನೀಡಲಾಗಿದೆ. ಅವರಿಂದ ಉತ್ತರ ಬಂದ ಬಳಿಕ ಕಾನೂನು ಕ್ರಮ ಜರುಗಿಸಲು ಸಾರಿಗೆ ಇಲಾಖೆ ನಿರ್ಧರಿಸಿದೆ.

ಹೊಸಪೇಟೆಯ ಆರ್‌ಟಿಓ ನೂರ್ ಬಾಷಾ, ಬಾಗಲಕೋಟೆಯ ಆರ್‌ಟಿಓ ಐ.ಬಿ.ಆವಟಿ, ಬೆಳಗಾವಿ ಆರ್‌ಟಿಓ ಟಿ.ಎಸ್.ನಿಂಗಣ್ಣನವರ್, ದಾವಣಗೆರೆ ಆರ್‌ಟಿಓ ಬಿ.ಆರ್.ವಿಜಯಕುಮಾರ್, ಗದಗ ಆರ್‌ಟಿಓಗಳಾಗಿದ್ದ ವಿ.ಆರ್.ಶಂಭುಲಿಂಗ, ಸಿ.ಬಿ. ಪಾಟೀಲ್, ಕೊಪ್ಪಳ ಆರ್‌ಟಿಓ ಶಿವರಾಜ್ ಬಿ.ಪಾಟೀಲ್ ನೋಟಿಸ್ ಪಡೆದವರಲ್ಲಿ ಸೇರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.