ADVERTISEMENT

ಗಣಿ ಗಡಿ ಸಮೀಕ್ಷೆಗೆ ಕೇಂದ್ರ ಅಧಿಕಾರಿಗಳ ತಂಡ

​ಪ್ರಜಾವಾಣಿ ವಾರ್ತೆ
Published 29 ಮೇ 2018, 19:29 IST
Last Updated 29 ಮೇ 2018, 19:29 IST
ಭಾರತೀಯ ಸರ್ವೇಕ್ಷಣಾ ಇಲಾಖೆ ಅಧಿಕಾರಿಗಳ ತಂಡ ಮಂಗಳವಾರ ಕರ್ನಾಟಕ, ಆಂಧ್ರಪ್ರದೇಶದ ನಡುವಿನ ಗಣಿ ಗಡಿ ವಿವಾದ ಪ್ರದೇಶಗಳಿಗೆ ಭೇಟಿ ನೀಡಿತು
ಭಾರತೀಯ ಸರ್ವೇಕ್ಷಣಾ ಇಲಾಖೆ ಅಧಿಕಾರಿಗಳ ತಂಡ ಮಂಗಳವಾರ ಕರ್ನಾಟಕ, ಆಂಧ್ರಪ್ರದೇಶದ ನಡುವಿನ ಗಣಿ ಗಡಿ ವಿವಾದ ಪ್ರದೇಶಗಳಿಗೆ ಭೇಟಿ ನೀಡಿತು   

ಬಳ್ಳಾರಿ: ಆಂಧ್ರ ಪ್ರದೇಶ ಮತ್ತು ಕರ್ನಾಟಕ ನಡುವಿನ ಗಣಿ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಸಮೀಕ್ಷೆ ನಡೆಸಲು ಕೇಂದ್ರದ ಭೂಮಾಪನ ಇಲಾಖೆ ಅಧಿಕಾರಿಗಳ ತಂಡ ನಗರಕ್ಕೆ ಬಂದಿದೆ.

ಭಾರತೀಯ ಸರ್ವೇಕ್ಷಣಾ ಇಲಾಖೆಯ ಹೆಚ್ಚುವರಿ ಉಪ ಪ್ರಧಾನ ಸರ್ವೇಯರ್‌ ನೇತೃತ್ವದ 20 ಅಧಿಕಾರಿಗಳ ತಂಡ, ಇದೇ 31ರವರೆಗೆ ಗಡಿ ಪ್ರದೇಶವನ್ನು ಆಧುನಿಕ ತಂತ್ರಜ್ಞಾನದ ಮೂಲಕ ಸಮೀಕ್ಷೆ ನಡೆಸಲಿದೆ.

ವಿವಾದಿತ ಗಣಿ ಪ್ರದೇಶವಾದ ತುಮಟಿ, ಬೆಳಗಲ್ಲು, ಸಿದ್ದಾಪುರ ಸೇರಿದಂತೆ ವಿವಿಧೆಡೆ ತಂಡ ಭೇಟಿ ನೀಡಿ ಪರಿಶೀಲಿಸಿತು. ರಾಜ್ಯದ ಗಡಿ ನಾಶ ಮಾಡಿ ಗಣಿಗಾರಿಕೆ ನಡೆಸಿದೆ ಎಂಬ ಆರೋಪ ಓಬಳಾಪುರಂ ಗಣಿ ಕಂಪನಿ ಮೇಲಿದೆ. ಹಾಗಾಗಿ ಸುಪ್ರೀಂ ಕೋರ್ಟ್ ಗಣಿ ಗಡಿ ಸಮೀಕ್ಷೆಗೆ 2013ರಲ್ಲಿ ಆದೇಶಿಸಿತ್ತು.
ಬಳಿಕ 2017ರ ಡಿ.7ರಂದು ಮತ್ತೊಂದು ಆದೇಶ ಹೊರಡಿಸಿ, 12 ವಾರಗಳ ಗಡುವು ನೀಡಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.