ಬೆಂಗಳೂರು: ಗುಟ್ಕಾ ನಿಷೇಧಕ್ಕೆ ಸಂಬಂಧಿಸಿದಂತೆ ಅಡಿಕೆ ಬೆಳೆಗಾರರು ಮತ್ತು ಅಡಿಕೆ ಬೆಳೆಯುವ ಪ್ರದೇಶಗಳ ಚುನಾಯಿತ ಪ್ರತಿನಿಧಿಗಳ ಸಭೆ ಕರೆದು ಚರ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ವಿಧಾನ ಪರಿಷತ್‌ನಲ್ಲಿ ಭರವಸೆ ನೀಡಿದರು.
ಪ್ರತಿಪಕ್ಷಗಳ ಸದಸ್ಯರ ಬೇಡಿಕೆ ಯಂತೆ ಈ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಗುಟ್ಕಾ ನಿಷೇಧದ ಬಳಿಕೆ ಅಡಿಕೆ ದರ ಕುಸಿದಿದೆ ಎಂಬ ವಾದದಲ್ಲಿ ಹುರುಳಿಲ್ಲ. ರಾಜ್ಯದ ಯಾವುದೇ ಮಾರುಕಟ್ಟೆಗಳಲ್ಲೂ ದರ ಕುಸಿದಿಲ್ಲ ಎಂದು ಅಂಕಿ-ಅಂಶ ನೀಡಿದರು.
`ಜೂನ್ 3ರೊಳಗೆ ಗುಟ್ಕಾ ನಿಷೇಧಿಸುವುದು ಅನಿವಾರ್ಯ ಆಗಿತ್ತು. ಸುಪ್ರೀಂಕೋರ್ಟ್ ಈ ಕುರಿತು ಸ್ಪಷ್ಟವಾದ ನಿರ್ದೇಶನ ನೀಡಿತ್ತು. ಜೂನ್ 26ರೊಳಗೆ ಈ ಕುರಿತು ವರದಿ ಸಲ್ಲಿಕೆಗೆ ಕಾಲಾವಕಾಶ ಇದೆ. ಇದನ್ನು ತಪ್ಪಾಗಿ ಅರ್ಥೈಸು ವುದು ಬೇಡ. ಸರ್ಕಾರ ಸಿಗರೇಟು, ಬೀಡಿ ಲಾಬಿಗೆ ಮಣಿದಿದೆ ಎಂಬ ಟೀಕೆಗಳಲ್ಲಿ ಅರ್ಥವಿಲ್ಲ. ನಾವು ಯಾವ ಲಾಬಿಗೂ ಮಣಿಯುವುದಿಲ್ಲ' ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.