ADVERTISEMENT

ಗೋಕಾಕ್ ಬಳಿ ತಂದೆಯಿಂದಲೇ ಗುಂಡಿಕ್ಕಿ ಮಗನ ಕೊಲೆ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2011, 19:30 IST
Last Updated 27 ಏಪ್ರಿಲ್ 2011, 19:30 IST

ಗೋಕಾಕ:  ಗ್ರಾಮದಲ್ಲಿ ಹಿರಿತನದ ಕೆಲಸ ನಿರ್ವಹಿಸಲು ಅವಕಾಶ ನೀಡದ ಮಗನ ಪ್ರವೃತ್ತಿಯಿಂದ ರೋಸಿ ಹೋಗಿದ್ದ ತಂದೆ  ಪಿಸ್ತೂಲ್‌ನಿಂದ ಗುಂಡು ಹಾರಿಸಿ ಮಗನನ್ನು ಕೊಲೆ ಮಾಡಿದ ಘಟನೆ ತಾಲ್ಲೂಕಿನ ಕಣಸಗೇರಿ ಗ್ರಾಮದಲ್ಲಿ ಬುಧವಾರ ನಡೆದಿದೆ.

ಮೃತನನ್ನು ಸಿದ್ರಾಯಪ್ಪ ಬೀರಪ್ಪ ರಾಜನಕಟ್ಟಿ (28) ಎಂದು ಗುರುತಿಸಲಾಗಿದೆ. ಈ ಕುರಿತು ಮೃತನ ಪತ್ನಿ ನಿಂಗವ್ವ ಅವರು ಮಾವನ ವಿರುದ್ಧ ದೂರು ನೀಡಿದ್ದಾರೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.