ADVERTISEMENT

ಘಟ್ಟ, ಕರಾವಳಿಯಲ್ಲಿ ಭಾರಿ ಮಳೆ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2011, 19:30 IST
Last Updated 5 ಸೆಪ್ಟೆಂಬರ್ 2011, 19:30 IST

ಬೆಂಗಳೂರು:  ಕಳೆದ 24 ಗಂಟೆಗಳಲ್ಲಿ ರಾಜ್ಯದ ಕರಾವಳಿ ಸೇರಿದಂತೆ ಉತ್ತರ ಒಳನಾಡಿನ ಕೆಲವೆಡೆ ಮಳೆಯಾಗಿದ್ದು, ಕ್ಯಾಸಲ್ ರಾಕ್‌ನಲ್ಲಿ 6 ಸೆಂ.ಮೀ. ಗರಿಷ್ಠ ಪ್ರಮಾಣದ ಮಳೆಯಾಗಿದೆ.ಕೊಲ್ಲೂರಿನಲ್ಲಿ 4, ಸಿದ್ಧಾಪುರ, ಲಿಂಗನಮಕ್ಕಿಯಲ್ಲಿ 3,
 
ಧರ್ಮಸ್ಥಳ, ಪುತ್ತೂರು, ಗೇರುಸೊಪ್ಪ, ಗೋಕರ್ಣ, ಕುಮಟ, ಅಂಕೋಲ, ಯಲ್ಲಾಪುರ, ಭಾಗಮಂಡಲ, ಪೊನ್ನಂಪೇಟೆ, ಮೂರ್ನಾಡು, ಹೊಸನಗರ, ಆಗುಂಬೆಯಲ್ಲಿ 2, ಬಂಟ್ವಾಳ, ಸುಬ್ರಹ್ಮಣ್ಯ, ಉಪ್ಪಿನಂಗಡಿ, ಹೊನ್ನಾವರ, ಚಿತ್ತಾಪುರ, ಮಾದಾಪುರ, ಸೋಮವಾರಪೇಟೆ, ತಾಳಗುಪ್ಪ, ತೀರ್ಥಹಳ್ಳಿ, ಸೊರಬ, ಕೊಟ್ಟಿಗೆಹಾರ, ಮೂಡಿಗೆರೆ, ಕೊಪ್ಪ, ಸಕಲೇಶಪುರ, ಗೌರಿಬಿದನೂರು, ಗುಡಿಬಂಡೆಯಲ್ಲಿ 1 ಸೆಂ.ಮೀ. ಮಳೆಯಾಗಿದೆ.

ಮುನ್ಸೂಚನೆ: ಮುಂದಿನ 48 ಗಂಟೆಗಳಲ್ಲಿ ರಾಜ್ಯದ ಕರಾವಳಿ ಮತ್ತು ಘಟ್ಟ ಪ್ರದೇಶಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.