ADVERTISEMENT

ಚಿಂತಾಮಣಿಯಲ್ಲಿ 12 ಸೆಂ.ಮೀ. ಮಳೆ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2017, 19:30 IST
Last Updated 2 ಅಕ್ಟೋಬರ್ 2017, 19:30 IST

ಬೆಂಗಳೂರು: ಸೋಮವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ರಾಜ್ಯದ ಒಳನಾಡಿನ ಕೆಲವು ಪ್ರದೇಶಗಳಲ್ಲಿ ಹಾಗೂ ಕರಾವಳಿಯಲ್ಲಿ ಉತ್ತಮ ಮಳೆಯಾಗಿದೆ.

ಚಿಂತಾಮಣಿ 12, ಗೇರುಸೊಪ್ಪ, ಶ್ರೀನಿವಾಸಪುರ, ರಾಯಲಪಡು ತಲಾ 9, ಗೌರಿಬಿದನೂರು 7, ಚಿತ್ರದುರ್ಗ 6, ಹೊನ್ನಾವರ, ಬೈಲಹೊಂಗಲ, ಸಿದ್ದಾಪುರ, ಆಗುಂಬೆ, ಕಳಸ, ಹೊಳೆನರಸೀಪುರ, ಕೋಲಾರ, ಬೆಂಗಳೂರು ತಲಾ 5, ಕಾರ್ಕಳ, ಹೊಸಕೋಟೆ, ನೆಲಮಂಗಲ, ಹಿರಿಯೂರು ತಲಾ 4, ಧರ್ಮಸ್ಥಳ, ಕುಮಟಾ, ಸವಣೂರು, ಬೆಳ್ಳಟ್ಟಿ, ನರಗುಂದ, ಕೊಪ್ಪಳ, ಯಲಬುರ್ಗ, ಚಿತ್ತಾಪುರ, ರಾಯಚೂರು, ಮಸ್ಕಿ, ಮಡಿಕೇರಿ, ಶೃಂಗೇರಿ, ಕೊಟ್ಟಿಗೆಹಾರ, ಕಮ್ಮರಡಿ, ಬಾಳೆಹೊನ್ನೂರು, ನರಸಿಂಹರಾಜಪುರ, ಚನ್ನರಾಯಪಟ್ಟಣ, ಹೆಸರಘಟ್ಟ, ಬಳ್ಳಾರಿ, ಉಚ್ಚಂಗಿದುರ್ಗ, ಮಧುಗಿರಿ, ಭದ್ರಾವತಿ ತಲಾ 3, ಶಿವಮೊಗ್ಗ,  ಹುಲಿಯೂರುದುರ್ಗ, ಮಾಗಡಿ ತಲಾ 2,  ಮೂಲ್ಕಿ, ಕೋಟಾ, ಕುಂದಾಪುರ, ಅಂಕೋಲಾ, ಮುಂಡಗೋಡು, ಲೋಂಡಾ, ಹಾನಗಲ್‌, ಗದಗ, ಸೇಡಂ, ಸೋಮವಾರಪೇಟೆ, ತಾಳಗುಪ್ಪ, ಅಜ್ಜಂಪುರ, ಹಾಸನ, ಶ್ರವಣಬೆಳಗೊಳ, ಬೆಳ್ಳೂರು, ತಿಪಟೂರು, ಶಿರಾದಲ್ಲಿ ತಲಾ 1 ಸೆಂ.ಮೀ. ಮಳೆಯಾಗಿದೆ.

ಹವಾಮಾನ ಮುನ್ಸೂಚನೆ: ಮುಂದಿನ 48 ಗಂಟೆಗಳಲ್ಲಿ ರಾಜ್ಯದ ಕರಾವಳಿಯ ಹಲವೆಡೆ ಮತ್ತು ಒಳನಾಡಿನ ಕೆಲವು ಪ್ರದೇಶಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.