
ಪ್ರಜಾವಾಣಿ ವಾರ್ತೆಚಿತ್ರದುರ್ಗ: ಬೆಂಗಳೂರಿನ ವಿಚಾರವಾದಿಗಳ ವೇದಿಕೆ - ಕರ್ನಾಟಕ (ವಿವೇಕ)ದಿಂದ ನೀಡಲಾಗುವ ವಿಚಾರವಾದಿ ‘ಪೆರಿಯಾರ್ ಪ್ರಶಸ್ತಿ’ಗಾಗಿ ಈ ಬಾರಿ ಚಿತ್ರದುರ್ಗದ ಮರುಘಾಮಠದ ಶಿವಮೂರ್ತಿ ಶರಣರನ್ನು ಆಯ್ಕೆ ಮಾಡಲಾಗಿದೆ.
ಪ್ರಶಸ್ತಿಯು ₹ 25 ಸಾವಿರ ನಗದು, ಪೆರಿಯಾರ್ ಪುತ್ಥಳಿ ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ ಎಂದು ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷ ತಲಕಾಡು ಚಿಕ್ಕರಂಗೇಗೌಡ ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪೆರಿಯಾರ್ ಎಂದು ಖ್ಯಾತರಾದ ಇ.ವಿ.ರಾಮಸ್ವಾಮಿ ನಾಯ್ಕರ್ ಅವರ 136ನೇ ಜಯಂತಿ ಅಂಗವಾಗಿ ಬೆಂಗಳೂರಿನ ಸೆನೆಟ್ ಹಾಲ್‌ನಲ್ಲಿ ಇದೇ 21 ರಂದು ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ತಿಳಿಸಿದರು. 2008ರಿಂದ ಈ ಪ್ರಶಸ್ತಿ ನೀಡಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.