ಬೆಂಗಳೂರು: `ಕಲಾವಿದರು ಜನಾಕರ್ಷಕವಾದ ನೃತ್ಯ ಪ್ರದರ್ಶಿಸಿದ್ದರಿಂದ ಅವರಿಗೆ 1,000 ರೂಪಾಯಿಯ ನೋಟು ನೀಡಿದ್ದೇನೆ. ಇದರಲ್ಲಿ ರಾಜಕೀಯ ಉದ್ದೇಶ ಇಲ್ಲ~ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಚುನಾವಣಾ ಆಯೋಗಕ್ಕೆ ನೀಡಿರುವ ಉತ್ತರದಲ್ಲಿ ಸ್ಪಷ್ಟಪಡಿಸಿದ್ದಾರೆ.
ಯಡಿಯೂರಪ್ಪ ಅವರು ಇದೇ 9ರಂದು ಕೊಪ್ಪಳ ಉಪ ಚುನಾವಣೆ ಪ್ರಚಾರದ ವೇಳೆ ವ್ಯಕ್ತಿಯೊಬ್ಬರಿಗೆ ಸಾವಿರ ರೂಪಾಯಿ ನೋಟು ನೀಡಿದ್ದರು. ಅದನ್ನು ಚುನಾವಣಾ ಆಯೋಗದ ಛಾಯಾಗ್ರಾಹಕರು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದರು.
ಈ ಸಂಬಂಧ ಆಯೋಗ ಯಡಿಯೂರಪ್ಪ ಅವರಿಗೆ ನೋಟಿಸ್ ನೀಡಿ, ಸೆ.18ರೊಳಗೆ ಉತ್ತರ ನೀಡುವಂತೆ ಸೂಚಿಸಿತ್ತು.ಉತ್ತರದಲ್ಲಿ ಹಣ ನೀಡಿದ್ದನ್ನು ಒಪ್ಪಿಕೊಂಡಿರುವ ಅವರು, ಹಣ ಪಡೆದ ಕಲಾವಿದ ವೀರಯ್ಯ ಎಂಬಾತ ಗಂಗಾವತಿ ವಿಧಾನಸಭಾ ಕ್ಷೇತ್ರಕ್ಕೆ ಸೇರಿದವರು. ಅವರು ಕೊಪ್ಪಳ ಕ್ಷೇತ್ರದ ಮತದಾರರಲ್ಲ ಎಂದೂ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.