ADVERTISEMENT

ಚುನಾವಣೆ ವೇಳೆ ಮಾರಲು ಅಕ್ರಮ ದಾಸ್ತಾನು: ₹ 7.15 ಲಕ್ಷ ಮೌಲ್ಯದ ಗೋವಾ ಮದ್ಯ ವಶ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2019, 18:38 IST
Last Updated 1 ಮಾರ್ಚ್ 2019, 18:38 IST

ಕಾರವಾರ: ಲೋಕಸಭಾ ಚುನಾವಣೆ ವೇಳೆ ಮಾರಾಟ ಮಾಡಲೆಂದು, ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ₹7.15 ಲಕ್ಷ ಮೌಲ್ಯದ 2,440 ಲೀಟರ್‌ ಗೋವಾ ಮದ್ಯವನ್ನು ಅಬಕಾರಿ ಹಾಗೂ ಪೊಲೀಸ್ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಗುರುವಾರ ರಾತ್ರಿ ವಶಪಡಿಸಿಕೊಂಡಿದ್ದಾರೆ.

‘ಇದು, ತಾಲ್ಲೂಕಿನ ಶಿರವಾಡದ ದಿಲೀಪ್ ನಾಯ್ಕ ಎನ್ನುವವರಿಗೆ ಸೇರಿದ್ದು ಎನ್ನಲಾಗಿದೆ. ಜತೆಗೆ, ಅಮದಳ್ಳಿಯ ವಿಷ್ಣು ತಳೇಕರ್, ಚೆಂಡಿಯಾದ ಸುನೀಲ್ ಪಡ್ತಿ ಕೂಡ ಇದರಲ್ಲಿ ಆರೋಪಿತರಾಗಿದ್ದಾರೆ. ಮದ್ಯ ದಾಸ್ತಾನು ಮಾಡಿಕೊಂಡಿದ್ದ ಮನೆಯ ಮಾಲೀಕ ಅಮದಳ್ಳಿಯ ಸೀತಾರಾಮ್‌ ಚಿಂಚಣಕರ್‌ ಸೇರಿದಂತೆ ನಾಲ್ವರೂ ಕಣ್ಮರೆಯಾಗಿದ್ದು, ಅವರಿಗಾಗಿ ಹುಡುಕಾಟ ನಡೆದಿದೆ’ ಎಂದು ಅಬಕಾರಿ ಜಿಲ್ಲಾ ಅಧಿಕಾರಿ ಎಲ್.ಎ.ಮಂಜುನಾಥ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT