ADVERTISEMENT

ಜಗತ್ತಿನ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಸಾಲುಮರದ ತಿಮ್ಮಕ್ಕ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2016, 19:30 IST
Last Updated 24 ನವೆಂಬರ್ 2016, 19:30 IST
ಜಗತ್ತಿನ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಸಾಲುಮರದ ತಿಮ್ಮಕ್ಕ
ಜಗತ್ತಿನ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಸಾಲುಮರದ ತಿಮ್ಮಕ್ಕ   
ಬೆಂಗಳೂರು: ತಮ್ಮ ಜೀವನವನ್ನು ಪರಿಸರ ಸಂರಕ್ಷಣೆಗೆ ಮುಡಿಪಾಗಿಟ್ಟ ಸಾಲುಮರದ ತಿಮ್ಮಕ್ಕ ಅವರು ಬಿಬಿಸಿಯ ಜಗತ್ತಿನ 100 ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
 
ಬಿಬಿಸಿ ಪ್ರಕಟಿಸಿದ 2016ನೇ ಸಾಲಿನ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ತಿಮ್ಮಕ್ಕ ಸೇರಿದಂತೆ ಭಾರತದ ಐವರು ಸ್ಥಾನ ಪಡೆದಿದ್ದಾರೆ.   
 
ಬಾಲಿವುಡ್‌ ನಟಿ ಸನ್ನಿ ಲಿಯೋನ್‌, ಮಹಾರಾಷ್ಟ್ರದ ಸಾಂಗ್ಲಿಯ 20ರ ಹರೆಯದ ಕಂಪ್ಯೂಟರ್‌ ಎಂಜಿನಿಯರಿಂಗ್‌ ವಿದ್ಯಾರ್ಥಿನಿ ಗೌರಿ ಚಿಂದಾರ್ಕರ್‌, ಟ್ರ್ಯಾಕ್ಟರ್ಸ್‌ ಆ್ಯಂಡ್‌ ಫಾರ್ಮ್‌ ಇಕ್ವಿಪ್‌ಮೆಂಟ್‌ ಲಿಮಿಟೆಡ್‌ನ ಸಿಇಒ ಮಲ್ಲಿಕಾ  ಶ್ರೀನಿವಾಸನ್‌ ಹಾಗೂ ಬರಹಗಾರ್ತಿಯಾಗಿ ಹೆಸರು ಮಾಡಿರುವ ಮುಂಬೈನ ಚಿತ್ರನಟಿ ನೇಹಾ ಸಿಂಗ್‌ ಅವರ ಹೆಸರು ಪಟ್ಟಿಯಲ್ಲಿದೆ. 
 
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಹುಲಿಕಲ್‌ನ ತಿಮ್ಮಕ್ಕ  80 ವರ್ಷಗಳಲ್ಲಿ 8 ಸಾವಿರ ಮರಗಳನ್ನು ನೆಟ್ಟು ಬೆಳೆಸಿದ್ದಾರೆ ಎಂದು ಬಿಬಿಸಿ ಹೇಳಿದೆ. 
 
‘ಸ್ಕೂಲ್‌ ಇನ್‌ ದಿ ಕ್ಲೌಡ್‌’ ಎಂಬ ಸ್ವಯಂ ಶಿಕ್ಷಣ ಕಲಿಕಾ ಪದ್ಧತಿ ಮೂಲಕ ಕಲಿತು ಸಾಧನೆ ಮಾಡಿದ್ದಕ್ಕೆ ಗೌರಿ ಚಿಂದಾರ್ಕರ್‌ ಅವರು ಈ ಗೌರವಕ್ಕೆ ಪಾತ್ರರಾಗಿದ್ದಾರೆ. 
 
‘ಟ್ರ್ಯಾಕ್ಟರ್‌ ಕ್ವೀನ್‌’ ಎಂದೇ ಹೆಸರು ಪಡೆದಿರುವ ಚೆನ್ನೈ ಮೂಲದ ಮಲ್ಲಿಕಾ ತಮ್ಮ ಕುಟುಂಬದ ಕಂಪೆನಿಯನ್ನು ಜಗತ್ತಿನ ಮೂರನೇ ಅತಿದೊಡ್ಡ ಟ್ರ್ಯಾಕ್ಟರ್‌ ತಯಾರಿಕಾ ಕಂಪೆನಿಯಾಗಿ ಬೆಳೆಸಿದ್ದಾರೆ ಎಂದು ಬಿಬಿಸಿ ಹೇಳಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.