ADVERTISEMENT

ಜನರೇ ಪ್ರಣಾಳಿಕೆ ರೂಪಿಸುವಂತಾಗಬೇಕು: ಪ್ರಕಾಶ್‌ ರೈ

​ಪ್ರಜಾವಾಣಿ ವಾರ್ತೆ
Published 5 ಮೇ 2018, 9:29 IST
Last Updated 5 ಮೇ 2018, 9:29 IST
ಪ್ರಕಾಶ ರೈ (ಸಂಗ್ರಹ ಚಿತ್ರ).
ಪ್ರಕಾಶ ರೈ (ಸಂಗ್ರಹ ಚಿತ್ರ).   

ದಾವಣಗೆರೆ: ಯಾವ ಪಕ್ಷಗಳ ಪ್ರಣಾಳಿಕೆಯಲ್ಲೂ ನನಗೆ ನಂಬಿಕೆ ಇಲ್ಲ. ಜನರೇ ಪ್ರಣಾಳಿಕೆ ರೂಪಿಸುವಂತಾಗಬೇಕು ಎಂದು ನಟ ಪ್ರಕಾಶ್ ರೈ ಹೇಳಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎಲ್ಲಾ ಪಕ್ಷಗಳು ಜನರಿಗೆ ಆಕಾಶ ತೋರಿಸುತ್ತಿವೆ. ಆದರೆ, ಹೇಳಿದಂತೆ ನಡೆದುಕೊಳ್ಳುವುದಿಲ್ಲ. ನಮಗೆ ಏನು ಬೇಕು ಎಂಬುದನ್ನು ಜನರೇ ಪಕ್ಷಗಳ ಮುಂದಿಡಬೇಕು’ ಎಂದರು.

‘ಜಸ್ಟ್ ಅಸ್ಕಿಂಗ್‌’(#JustAsking) ಕೇವಲ ಚುನಾವಣೆಗೆ ಸೀಮಿತವಲ್ಲ. ಇದು ಮುಗಿದ ಮೇಲೂ ಇರುತ್ತೆ ಎಂದು ಸ್ಪಷ್ಟಪಡಿಸಿದರು.

ADVERTISEMENT

‘ಇಂತಹ ಪಕ್ಷಕ್ಕೆ ಮತ ನೀಡಿ ಎಂದು ಹೇಳುವುದಿಲ್ಲ. ಆದರೆ, ಕೋಮುವಾದಿಗಳನ್ನು ದೂರವಿಡಿ’ ಎಂದು ಹೇಳುತ್ತೇನೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.