ADVERTISEMENT

ಜೈಲಿನೊಳಗೆ ಗಾಂಜಾ, ಮೊಬೈಲ್, ಸಿಮ್ ಪತ್ತೆ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2018, 13:13 IST
Last Updated 14 ಏಪ್ರಿಲ್ 2018, 13:13 IST

ಮಂಗಳೂರು: ನಗರದ ಜಿಲ್ಲಾ ಕಾರಾಗೃಹದಲ್ಲಿ ಶನಿವಾರ ಬೆಳಿಗ್ಗೆ ಪೊಲೀಸರು ದಿಢೀರ್‌ ತಪಾಸಣೆ ನಡೆಸಿದ್ದು, ಕೈದಿಗಳ ಬಳಿ‌ ಗಾಂಜಾ, ಮೊಬೈಲ್, ಸಿಮ್‌ ಕಾರ್ಡ್ ಸೇರಿದಂತೆ ನಿಷೇಧಿತ ವಸ್ತುಗಳು ಪತ್ತೆಯಾಗಿವೆ.

20 ಅಧಿಕಾರಿಗಳು, 30 ಸಿಬ್ಬಂದಿ, ಮಹಿಳಾ ಸಿಬ್ಬಂದಿ ಇದ್ದ ತಂಡ ಕಾರ್ಯಾಚರಣೆ ನಡೆಸಿತು. ಕೈದಿಗಳಿರುವ ಎಲ್ಲ ಬ್ಯಾರಕ್ ಗಳಲ್ಲಿ ತಪಾಸಣೆ ನಡೆಸಲಾಗಿದೆ.

ಸುಮಾರು 250 ಗ್ರಾಂ. ಗಾಂಜಾ, ಬೀಡಿ ಕಟ್ಟುಗಳ, ಸಿಗರೇಟು, ಬೆಂಕಿಕಡ್ಡಿ ಪೊಟ್ಟಣಗಳು, ಕಟ್ಟರ್‌ಗಳು, ಮೊಬೈಲ್ ಮತ್ತು ಸಿಮ್ ಕಾರ್ಡ್‌ಗಳು ಪತ್ತೆಯಾಗಿವೆ ಎಂದು ಕಾನೂನು ಸುವ್ಯವಸ್ಥೆ ಡಿಸಿಪಿ ಹನುಮಂತರಾಯ ತಿಳಿಸಿದ್ದಾರೆ.

ADVERTISEMENT

ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.