ADVERTISEMENT

ಜೋಗದಲ್ಲಿ ಸಂಗೀತ ಕಾರಂಜಿ

​ಪ್ರಜಾವಾಣಿ ವಾರ್ತೆ
Published 20 ಜೂನ್ 2012, 19:30 IST
Last Updated 20 ಜೂನ್ 2012, 19:30 IST
ಜೋಗದಲ್ಲಿ ಸಂಗೀತ ಕಾರಂಜಿ
ಜೋಗದಲ್ಲಿ ಸಂಗೀತ ಕಾರಂಜಿ   

ಕಾರ್ಗಲ್: ಸಮೀಪದ ಜೋಗ ಜಲಪಾತದಲ್ಲಿ ಪ್ರಾಯೋಗಿಕವಾಗಿ ಚಾಲನೆಗೊಂಡಿರುವ ಸಂಗೀತ ಕಾರಂಜಿ ನಿರೀಕ್ಷೆಗೂ ಮೀರಿ ಜನಾಕರ್ಷಣೆ ಹೊಂದುತ್ತಿದೆ. ಸರ್ವಋತು ಪ್ರವಾಸಿ ತಾಣವಾಗಿ ಜಲಪಾತ ಪ್ರದೇಶವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ `ಜೋಗ ಅಭಿವೃಧ್ಧಿ ಪ್ರಾಧಿಕಾರ~ ಕೈಗೊಂಡಿರುವ ಸಂಕಲ್ಪ ಯಶಸ್ಸಿನತ್ತ ಸಾಗುತ್ತಿದೆ.

ಆರಂಭದಲ್ಲಿ ಸ್ಥಳೀಯರ ಉಪಸ್ಥಿತಿ ಮಾತ್ರ ರಾತ್ರಿ ಸಂದರ್ಭದಲ್ಲಿ ಇಲ್ಲಿ ಕಂಡು ಬರುತ್ತಿತ್ತು. ಆದರೆ, ಇತ್ತೀಚೆಗಿನ ದಿನಗಳಲ್ಲಿ ಆಗಮಿಸುವ ಪ್ರವಾಸಿಗರು ರಾತ್ರಿ ಜೋಗದಲ್ಲಿ ತಂಗುತ್ತಿದ್ದು, ಸಂಗೀತ ಕಾರಂಜಿಯ ದರ್ಶನದ ನಂತರವಷ್ಟೇ ವಾಪಸ್ ಹೋಗುತ್ತಿದ್ದಾರೆ.

ಮೊದಲು ಸಂಜೆಯಾಗುತ್ತಿದ್ದಂತೆ ಬಿಕೋ ಎನ್ನುತ್ತಿದ್ದ ಜೋಗ ಜಲಪಾತ, ಈಗ ವಾಹನಗಳ ಸಂಚಾರ ಮತ್ತು ಪ್ರವಾಸಿಗರ ಓಡಾಟ ಹೆಚ್ಚಲು ಕಾರಣವಾಗಿದೆ.

ಇವೆಲ್ಲದರ ಮಧ್ಯೆ ಜಲಪಾತದಲ್ಲಿ ಸಂಗೀತ ಕಾರಂಜಿ ದರ್ಶನಕ್ಕೆ ರಾತ್ರಿಯಲ್ಲಿ ಅಳವಡಿಸಿದ್ದ ಬೀದಿ ದೀಪಗಳು  ಒಂದು ತಿಂಗಳಿಂದ ಕೆಟ್ಟುಹೋಗಿದ್ದು, ಪ್ರವಾಸಿಗರು ಭಯದಿಂದ ಹೆಜ್ಜೆ ಇಟ್ಟು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ದೂರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.