ADVERTISEMENT

ಡೆಂಗೆ: ಯುವಕ ಸಾವು

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2012, 19:30 IST
Last Updated 26 ಏಪ್ರಿಲ್ 2012, 19:30 IST

ಸಿಂಧನೂರು (ರಾಯಚೂರು ಜಿ): ತಾಲ್ಲೂಕಿನ 2ರಿಂದ 5ರವರೆಗಿನ ಪುನರ್ವಸತಿ ಕ್ಯಾಂಪ್‌ಗಳಲ್ಲಿ ಕೆಲದಿನಗಳಿಂದ ಡೆಂಗೆ ಜ್ವರ ಉಲ್ಬಣಿಸಿದೆ. ವಿಪ್ಲಬ್ ಕಬಿರಾಜ (25) ಎರಡು ದಿನದ ಹಿಂದೆ ಮೃತಪಟ್ಟಿದ್ದಾರೆ.

ಒಟ್ಟು 18 ಜನರು ವಿವಿಧೆಡೆ ಡೆಂಗೆ ಜ್ವರಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೇಸಿಗೆ ದಿನದಲ್ಲಿ ಈ ಕ್ಯಾಂಪ್‌ಗಳಲ್ಲಿ ಡೆಂಗೆ ಜ್ವರ ಬರುತ್ತಿದ್ದು, ಕಳೆದ ವರ್ಷ ಪುನರ್ವಸತಿ ಕ್ಯಾಂಪ್ 3ರಲ್ಲಿ ಮೂವರು ಡೆಂಗೆ ಜ್ವರದಿಂದ ಮೃತಪಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.