ADVERTISEMENT

ತಂತ್ರಜ್ಞಾನ ಕಲಿಕೆ: ಶೇ 96 ಬಾಲಕಿಯರಿಗೆ ಆಸಕ್ತಿ

ಜಾಗತಿಕ ಡಿಜಿಟಲ್ ಪಾವತಿ ವೇದಿಕೆ ಪೇಪಾಲ್ ಸಮೀಕ್ಷೆ

ಪಿಟಿಐ
Published 15 ಜೂನ್ 2018, 19:30 IST
Last Updated 15 ಜೂನ್ 2018, 19:30 IST
ತಂತ್ರಜ್ಞಾನ ಕಲಿಕೆ: ಶೇ 96 ಬಾಲಕಿಯರಿಗೆ ಆಸಕ್ತಿ
ತಂತ್ರಜ್ಞಾನ ಕಲಿಕೆ: ಶೇ 96 ಬಾಲಕಿಯರಿಗೆ ಆಸಕ್ತಿ   

ನವದೆಹಲಿ: ತಂತ್ರಜ್ಞಾನ ಕುರಿತು ಶಾಲೆಗಳಲ್ಲಿ ಹೆಚ್ಚಿನ ಮಟ್ಟದಲ್ಲಿ ಕಲಿಯಬೇಕೆಂದು ದೇಶದ ಶೇ 96ರಷ್ಟು ಬಾಲಕಿಯರು ಆಸಕ್ತಿ ವ್ಯಕ್ತಪಡಿಸಿದ್ದಾರೆ ಎಂದು ಸಮೀಕ್ಷೆಯೊಂದು ತಿಳಿಸಿದೆ.

ಜಾಗತಿಕ ಡಿಜಿಟಲ್ ಪಾವತಿ ವೇದಿಕೆ ಪೇಪಾಲ್ (PayPal) ನಡೆಸಿದ ಸಮೀಕ್ಷೆಯಲ್ಲಿ 7ರಿಂದ 14 ವಯೋಮಾನದ 200 ವಿದ್ಯಾರ್ಥಿ ಗಳು ಭಾಗವಹಿಸಿದ್ದರು.

ಇವರಲ್ಲಿ ಶೇ 61 ಬಾಲಕಿಯರು, ಪ‍್ರಸ್ತುತ ಶಾಲಾಪಠ್ಯಗಳಲ್ಲಿ ತಂತ್ರಜ್ಞಾನ ವಿಷಯಕ್ಕೆ ಹೆಚ್ಚಿನ ಆದ್ಯತೆ ನೀಡದೆ ಇರುವುದರಿಂದ ಕಾರ್ಯಾಗಾರಗಳು ಹಾಗೂ ಸಕ್ರಿಯ ಓದಿನ ಮೂಲಕ ತಂತ್ರಜ್ಞಾನ ವಿಷಯದಲ್ಲಿ ಹೆಚ್ಚಿನ ಅಧ್ಯಯನ ಮಾಡಬೇಕೆಂದು ಆಸಕ್ತಿ ತೋರಿದ್ದಾರೆ.

ADVERTISEMENT

ತಂತ್ರಜ್ಞಾನ ಕ್ಷೇತ್ರದಲ್ಲಿ ಭವಿಷ್ಯ ಕಂಡುಕೊಳ್ಳಬೇಕೆಂದು ತಮ್ಮ ತಾಯಂದಿರು ಸ್ಫೂರ್ತಿ ನೀಡುತ್ತಾರೆ ಎಂದು ಶೇ 51ರಷ್ಟು ಮಂದಿ ತಿಳಿಸಿದ್ದಾರೆ. ಶೇ 34ರಷ್ಟು ಮಂದಿ ತಮ್ಮ ತಂದೆ, ಶೇ 15ರಷ್ಟು ಮಂದಿ ತಮ್ಮ ಶಿಕ್ಷಕರು ತಮಗೆ ‍‍ಪ್ರೋತ್ಸಾಹ ನೀಡುತ್ತಾರೆ ಎಂದು ತಿಳಿಸಿದ್ದಾರೆ.

‘ಭಾರತದಲ್ಲಿ ಕೇವಲ ಕೋಡರ್‌ ಮತ್ತು ಎಂಜಿನಿಯರ್‌ಗಳ ಹೊರತಾಗಿ, ತಂತ್ರಜ್ಞಾನ ಸಮುದಾಯ ಸದೃಢಗೊಳಿಸುವ ಸಲುವಾಗಿ ತಂತ್ರಜ್ಞಾನ ಕೌಶಲ ಹೊಂದಿರುವವರ ಅವಶ್ಯಕತೆ ಇದೆ’ ಎಂದು ಪೇಪಾಲ್‌ನ ತಂತ್ರಜ್ಞಾನ ಮತ್ತು ಎಂಜಿನಿಯರಿಂಗ್ ವಿಭಾಗದ ಪ್ರಧಾನ ನಿರ್ದೇಶಕ ಗುರುಭಟ್ ತಿಳಿಸಿದ್ದಾರೆ.

ಪೇಪಾಲ್‌ ಬಾಲಕಿಯರಿಗಾಗಿ ನಡೆಸುತ್ತಿರುವ ‘ಗರ್ಲ್ಸ್‌ ಇನ್ ಟೆಕ್‌’ ಕಾರ್ಯಕ್ರಮವನ್ನು ಸರ್ಕಾರಿ ಶಾಲೆಗಳ ಬಾಲಕಿಯರಿಗೂ ವಿಸ್ತರಿಸಿದೆ. ತಂತ್ರಜ್ಞಾನದ ಪ್ರಾಥಮಿಕ ಮಾಹಿತಿಯಿಂದ ಕೋಡಿಂಗ್‌ ಪ್ರೋಗ್ರಾಮ್‌ಗಳ ತನಕವೂ ಈ ಕಾರ್ಯಕ್ರಮದ ಪಠ್ಯ ರೂಪಿಸಲಾಗಿದೆ ಎಂದು ಅವರು ಹೇಳಿದ್ದಾರೆ.

**

ರೊಬೊಟಿಕ್ಸ್‌ ಕಲಿಕೆ

ಕಾರ್ಯಾಗಾರದ ವೇಳೆ, ಅಭ್ಯರ್ಥಿಗಳು ಸ್ಕ್ರ್ಯಾಚ್, ಪೈಥಾನ್, ಆ್ಯಪ್ ಇನ್ವೆಂಟರ್ ಹಾಗೂ ಆನ್‌ಲೈನ್‌ ಮಿ ಸೇರಿದಂತೆ ವಿವಿಧ ಪ್ರೋಗ್ರಾಮಿಂಗ್ ಲ್ಯಾಂಗ್ವೇಜ್‌ಗಳ ಕುರಿತು ಅಭ್ಯಾಸ ಮಾಡುತ್ತಾರೆ. ಜತೆಗೆ ರೊಬೊಟಿಕ್ಸ್‌ ಹಾಗೂ ಡಿಜಿಟಲ್ ಪೇಮೆಂಟ್ಸ್‌ ರೀತಿಯ ತಂತ್ರಜ್ಞಾನಗಳ ಕುರಿತೂ ಮಾಹಿತಿ ಪಡೆಯುತ್ತಾರೆ.

ಪೇಪಾಲ್‌ ಬಾಲಕಿಯರಿಗಾಗಿ ನಡೆಸುತ್ತಿರುವ ‘ಗರ್ಲ್ಸ್‌ ಇನ್ ಟೆಕ್‌’ ಕಾರ್ಯಕ್ರಮವನ್ನು ಸರ್ಕಾರಿ ಶಾಲೆಗಳ ಬಾಲಕಿಯರಿಗೂ ವಿಸ್ತರಿಸಿದೆ. ತಂತ್ರಜ್ಞಾನದ ಪ್ರಾಥಮಿಕ ಮಾಹಿತಿಯಿಂದ ಕೋಡಿಂಗ್‌ ಪ್ರೋಗ್ರಾಮ್‌ಗಳ ತನಕವೂ ಈ ಕಾರ್ಯಕ್ರಮದ ಪಠ್ಯ ರೂಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.