ADVERTISEMENT

ತೆಲಂಗಾಣ-ಛತ್ತಿಸಗಡ ಗಡಿಯಲ್ಲಿ ನಕ್ಸಲ್‌ ದಾಳಿಗೆ ಬೀದರ್‌ ಯೋಧ ಸಾವು

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2018, 13:47 IST
Last Updated 2 ಮಾರ್ಚ್ 2018, 13:47 IST
-ಸಾಂದರ್ಭಿಕ ಚಿತ್ರ
-ಸಾಂದರ್ಭಿಕ ಚಿತ್ರ   

ಬೀದರ್‌: ತೆಲಂಗಾಣ-ಛತ್ತಿಸಗಡ ಗಡಿಯಲ್ಲಿ ಗುರುವಾರ ನಡೆದ ನಕ್ಸಲರ ವಿರುದ್ಧದ ಕಾರ್ಯಾಚರಣೆ ಸಂದರ್ಭದಲ್ಲಿ ತೆಲಂಗಾಣ ನಕ್ಸಲ್ ನಿಗ್ರಹ ಪಡೆ ಕಾನ್‌ಸ್ಟೆಬಲ್‌ ಬೀದರ್‌ನ ಲಾಡಗೇರಿ ಗ್ರೇಸ್‌ ಕಾಲೊನಿಯ ಸುಶೀಲಕುಮಾರ ವಿಲ್ಸನ್ (32) ಮೃತಪಟ್ಟಿದ್ದಾರೆ.

ಸುಶೀಲ್‌ಕುಮಾರ 2001ರಲ್ಲಿ ತೆಲಂಗಾಣದ ಚಂದಾನಗರ ಪೊಲೀಸ್ ಠಾಣೆಗೆ ಕಾನ್‌ಸ್ಟೆಬಲ್ ಆಗಿ ನೇಮಕಗೊಂಡಿದ್ದರು. ನಂತರ ಅವರು ನಕ್ಸಲ್ ನಿಗ್ರಹ ಪಡೆಗೆ ಎರವಲು ಸೇವೆಯ ಮೇಲೆ ನಿಯೋಜನೆ ಗೊಂಡಿದ್ದರು. ಸುಶೀಲ್‌ಕುಮಾರ ತೆಲಂಗಾಣದಲ್ಲಿರುವ ಅಜ್ಜಿ ಮನೆಯಲ್ಲಿಯೇ ಬೆಳೆದು ಅಲ್ಲಿಯೇ ಶಿಕ್ಷಣ ಪಡೆದು ಪೊಲೀಸ್‌ ಇಲಾಖೆಗೆ ಸೇರಿದ್ದರು.

ಸುಶೀಲಕುಮಾರಗೆ ಪತ್ನಿ, ಮೂರು ವರ್ಷದ ಹೆಣ್ಣು ಮಗು ಇದೆ. ಯೋಧನ ಶವ ರಾತ್ರಿ 10ಕ್ಕೆ ಬೀದರ್‌ ಬರಲಿದೆ ಎಂದು ತೆಲಂಗಾಣ ಪೊಲೀಸರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.