ADVERTISEMENT

ದತ್ತ ಜಯಂತಿಗೆ ಕಳೆಗಟ್ಟಿದ ಸಂಕೀರ್ತನಾ ಯಾತ್ರೆ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2013, 19:30 IST
Last Updated 14 ಡಿಸೆಂಬರ್ 2013, 19:30 IST
ಚಿಕ್ಕಮಗಳೂರಿನಲ್ಲಿ ಶನಿವಾರ ದತ್ತಮಾಲಾ ಅಭಿಯಾನ ಮತ್ತು ದತ್ತಜಯಂತಿ ಅಂಗವಾಗಿ ವಿಶ್ವ ಹಿಂದೂ ಪರಿಷತ್‌, ಬಜರಂಗದಳದ ನೇತೃತ್ವದಲ್ಲಿ ಮಹಿಳೆಯರು ಸಂಕೀರ್ತನಾ ಯಾತ್ರೆ ನಡೆಸಿದರು
ಚಿಕ್ಕಮಗಳೂರಿನಲ್ಲಿ ಶನಿವಾರ ದತ್ತಮಾಲಾ ಅಭಿಯಾನ ಮತ್ತು ದತ್ತಜಯಂತಿ ಅಂಗವಾಗಿ ವಿಶ್ವ ಹಿಂದೂ ಪರಿಷತ್‌, ಬಜರಂಗದಳದ ನೇತೃತ್ವದಲ್ಲಿ ಮಹಿಳೆಯರು ಸಂಕೀರ್ತನಾ ಯಾತ್ರೆ ನಡೆಸಿದರು   

ಚಿಕ್ಕಮಗಳೂರು: ದತ್ತಮಾಲಾ ಅಭಿ­ಯಾನ ಮತ್ತು ದತ್ತಜಯಂತಿ ಅಂಗವಾಗಿ ಶನಿವಾರ ಬೆಳಿಗ್ಗೆ ನಗರ­ದಲ್ಲಿ ವಿಶ್ವ ಹಿಂದೂ ಪರಿಷತ್‌, ಬಜ­ರಂಗ ದಳದ ನೇತೃತ್ವ­ದಲ್ಲಿ ಮಹಿಳೆ­ಯ­ರು ಸಂಕೀರ್ತನಾ ಯಾತ್ರೆ ನಡೆಸಿದರು.

ನಂತರ ಗುರು ಇನಾಂ ದತ್ತಾತ್ರೇಯ ಪೀಠಕ್ಕೆ ತೆರಳಿ, ಪೊಲೀಸರ ಸರ್ಪಗಾವ­ಲಿನಲ್ಲಿ ಸರದಿ ಸಾಲಿನಲ್ಲಿ ನಿಂತು ದತ್ತಾತ್ರೇಯರ ಗುಹೆಯಲ್ಲಿ ಅನ­ಸೂಯ ದೇವಿ ಮತ್ತು ದತ್ತ ಪಾದುಕೆಗಳ ದರ್ಶನ ಪಡೆದರು.

ಗುಹೆ ಹೊರಭಾಗದ ತಾತ್ಕಾ­ಲಿಕ ಸಭಾಂ­­ಗಣ­ದಲ್ಲಿ ಅನ­ಸೂಯ ದೇವಿ ಪೂಜೆ, ಗಣಪತಿ ಹೋಮ, ದುರ್ಗಾ ಹೋಮ ನಡೆಸಿ, ದತ್ತಾ­ತ್ರೇಯ ಅವರ ತಾಯಿ ಅನ­ಸೂಯ ದೇವಿಯ ಜಯಂತಿ ಆಚರಿಸಿದರು. ಜಿಲ್ಲೆಯ ವಿವಿಧೆಡೆಯಿಂದ ಬಂದಿದ್ದ ಮಹಿಳೆ­ಯರು ಧಾರ್ಮಿಕ ಕಾರ್ಯ­ಕ್ರಮ­ಗಳಲ್ಲಿ ಪಾಲ್ಗೊಂಡು ದತ್ತಾ­ತ್ರೇಯ­ರ ಭಜನೆ ಮಾಡಿದರು. ಇದಕ್ಕೂ ಮೊದಲು ನಗರದ ಬೋಳ­­ರಾಮೇಶ್ವರ ದೇವಾ­ಲಯ ಆವ­ರಣ­ದಿಂದ ಆರಂಭವಾದ ಸಂಕೀರ್ತನಾ ಯಾತ್ರೆ ಐ.ಜಿ. ರಸ್ತೆ ಮತ್ತು ಆರ್.ಜಿ. ರಸ್ತೆಯಲ್ಲಿ ಸಾಗಿ ಕಾಮಧೇನು ಗಣಪತಿ ದೇವಾಲಯ ಆವರಣದವರೆಗೆ ನಡೆಯಿತು.

ಮಹಿಳಾ ಮೋರ್ಚಾ ಮುಖಂಡರು ಅನಸೂಯ ದೇವಿ ಭಾವಚಿತ್ರ ಹಿಡಿದುಕೊಂಡು, ದತ್ತಾತ್ರೇಯರ ನಾಮ­ಸ್ಮರಣೆ ಮಾಡುತ್ತಾ ಸಂಕೀರ್ತನಾ ಯಾತ್ರೆ ನಡೆಸಿದರು. ಯಾತ್ರೆ ಉದ್ದಕ್ಕೂ ಭಗವಾಧ್ವಜಗಳು ಹಾರಾಡಿದವು.

ಯಾತ್ರೆ ಹನುಮಂತಪ್ಪ ವೃತ್ತ ಬಳಸಿ ಬಸವನಹಳ್ಳಿ ಮುಖ್ಯ ರಸ್ತೆಯಲ್ಲಿ ಸಾಗಲು ಮುಂದಾಗುತ್ತಿದ್ದಂತೆ ಪೊಲೀ­ಸರು ತಡೆಯೊಡ್ಡಿದರು. ಶಾಂತಿ ಸಭೆ­ಯಲ್ಲಿ ತೀರ್ಮಾನವಾದಂತೆ ರತ್ನಗಿರಿ ರಸ್ತೆಯಲ್ಲಿ ತೆರಳಬೇಕು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದಾಗ, ಶಾಸಕ ಸಿ.ಟಿ.ರವಿ ಮತ್ತು ಸಂಘ ಪರಿವಾರದ ಮುಖಂಡರು ಸಮ್ಮತಿಸಿ, ನಿಗದಿತ ಮಾರ್ಗದಲ್ಲೆ ಯಾತ್ರೆ ಸಾಗಿದರು.

ವಿಶ್ವಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ಶಿವ­ಶಂಕರ್, ಮುರಳೀಧರ ಕಿಣಿ, ಬಜರಂಗ ದಳದ ಪ್ರೇಂ ಕಿರಣ್, ಸಂತೋಷ್ ಕೋಟ್ಯಾನ್ ಹಾಗೂ ಬಿಜೆಪಿ ಮುಖಂಡರು ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.