ADVERTISEMENT

ದಲಿತ ಅರ್ಚಕರ ನೇಮಕ ಮಾಡುತ್ತೇವೆ: ಸಿಎಂ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2017, 10:35 IST
Last Updated 15 ಅಕ್ಟೋಬರ್ 2017, 10:35 IST
ದಲಿತ ಅರ್ಚಕರ ನೇಮಕ ಮಾಡುತ್ತೇವೆ: ಸಿಎಂ ಸಿದ್ದರಾಮಯ್ಯ
ದಲಿತ ಅರ್ಚಕರ ನೇಮಕ ಮಾಡುತ್ತೇವೆ: ಸಿಎಂ ಸಿದ್ದರಾಮಯ್ಯ   

ಮೈಸೂರು: ಕೇರಳ ಮಾದರಿಯಲ್ಲಿ ಮುಜುರಾಯಿ ದೇಗುಲಗಳಲ್ಲಿ ದಲಿತ ಅರ್ಚಕರನ್ನು ನೇಮಕ ಮಾಡಲು ರಾಜ್ಯ ಸರ್ಕಾರ ಕೂಡ ಮುಕ್ತ ಮನಸ್ಸು ಹೊಂದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

‘ದಲಿತ ಅರ್ಚಕರನ್ನು ನೇಮಕ ಮಾಡಲು ನಮ್ಮ ವಿರೋಧ ಇಲ್ಲ‌. ನಾವೂ ನೇಮಕ ಮಾಡುತ್ತೇವೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ತಂತ್ರ, ಮಂತ್ರಗಳಿಗೆ ಹೆದರಲ್ಲ’

ADVERTISEMENT

ಮೈಸೂರು: ‘ವಿರೋಧಿಗಳ ತಂತ್ರ, ಮಂತ್ರಗಳಿಗೆ ಹೆದರುವ ಪ್ರಶ್ನೆಯೇ ಇಲ್ಲ. ನಾಯಕರಿಗಿಂತ ನನಗೆ ಜನರ ಮೇಲೆ ಹೆಚ್ಚು ನಂಬಿಕೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

‘2006ರಲ್ಲಿ ನಡೆದ ಉಪಚುನಾವಣೆಯಲ್ಲಿ ವಿರೋಧಿಗಳೆಲ್ಲಾ ಜೊತೆಗೂಡಿ ನನ್ನನ್ನು ಸೋಲಿಸಲು ಪ್ರಯತ್ನಿಸಿದರು. ಆಗ ಅಧಿಕಾರದಲ್ಲಿ ಇಲ್ಲದಿದ್ದರೂ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಾನು ಗೆದ್ದೆ. ಈ ಬಾರಿಯೂ ಗೆಲ್ಲುವ ವಿಶ್ವಾಸವಿದೆ. ಜೆಡಿಎಸ್‌, ಬಿಜೆಪಿ ಈ ಹಿಂದೆಯೂ ಒಂದುಗೂಡಿ ರೂಪಿಸಿದ ತಂತ್ರಗಳು ವಿಫಲವಾಗಿವೆ. ಶ್ರೀನಿವಾಸಪ್ರಸಾದ್‌ ಹತಾಶ ಮನೋಭಾವದಿಂದ ಮಾತನಾಡುತ್ತಿದ್ದಾರೆ. ವೈರಿಯ ವೈರಿ ಮಿತ್ರ ಎಂಬ ಮನೋಭಾವ ಅವರದ್ದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.