ADVERTISEMENT

ದಾವಣಗೆರೆಯಲ್ಲಿ ರೂ.37.10 ಲಕ್ಷ ವಶ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2013, 19:59 IST
Last Updated 23 ಏಪ್ರಿಲ್ 2013, 19:59 IST

ದಾವಣಗೆರೆ: ಹುಬ್ಬಳ್ಳಿಯಿಂದ ನಗರದತ್ತ ಸೂಕ್ತ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ ರೂ 37.10 ಲಕ್ಷ ನಗದನ್ನು ಚುನಾವಣಾ ಜಾಗೃತ ದಳದ ಅಧಿಕಾರಿಗಳು ಮತ್ತು ಪೊಲೀಸರು ಮಂಗಳವಾರ ವಶಪಡಿಸಿಕೊಂಡಿದ್ದಾರೆ.

ಹುಬ್ಬಳ್ಳಿಯಿಂದ ನಗರಕ್ಕೆ ಬರುತ್ತಿದ್ದ ಖಾಸಗಿ ಬಸ್‌ನ್ನು ಪಿಬಿರಸ್ತೆಯಲ್ಲಿ ತಡೆದು ತಪಾಸಣೆ ನಡೆಸಿದಾಗ ದಾವಣಗೆರೆಯ ವೆಂಕಟೇಶ್ ಬಳಿ ರೂ 29.50 ಲಕ್ಷ ಹಾಗೂ ಶಿವಮೊಗ್ಗದಿಂದ ಬರುತ್ತಿದ್ದ ಬಸ್‌ನಲ್ಲಿದ್ದ ಮಹೇಶ್ ಎಂಬುವರ ಬಳಿ ರೂ 7.60 ಲಕ್ಷ ನಗದು ಪತ್ತೆಯಾಗಿದೆ. ಇಬ್ಬರನ್ನೂ ವಿಚಾರಿಸಿದಾಗ ತಾವು ಆಭರಣ ವ್ಯಾಪಾರಿಗಳು ಎಂದು ಹೇಳಿಕೊಂಡಿದ್ದಾರೆ. ಆದರೆ, ಅದಕ್ಕೆ ಪೂರಕ ದಾಖಲೆ ಒದಗಿಸದ ಹಿನ್ನೆಲೆಯಲ್ಲಿ ಹಣ ವಶಪಡಿಸಿಕೊಳ್ಳಲಾಗಿದೆ ಎಂದು ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಜಂಟಿ ಆಯುಕ್ತ ಎಚ್.ಪಿ. ನಾಗರಾಜ್ ತಿಳಿಸಿದರು.

ಡಿವೈಎಸ್‌ಪಿ ಡಾ.ಶಿವಕುಮಾರ್, ಆದಾಯ ತೆರಿಗೆ ಅಧಿಕಾರಿ ರುದ್ರಪ್ಪ, ಪಿಎಸ್‌ಐ ಸಿದ್ದೇಶ್ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.