ADVERTISEMENT

ದಾವಣಗೆರೆ ಅಂದಗೊಳಿಸಲು ವಾಸ್ತುಶಿಲ್ಪಿ ‘ಆಕರ್ಷ’ಕ ಯೋಜನೆ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2013, 19:51 IST
Last Updated 28 ಸೆಪ್ಟೆಂಬರ್ 2013, 19:51 IST
ದಾವಣಗೆರೆಯ ರೋಟರಿ ಬಾಲಭವನದಲ್ಲಿ ಶನಿವಾರ ಆಯೋಜಿಸಿದ್ದ ಸರ್ಕಾರಿ ಕಟ್ಟಡಗಳು ಹೇಗಿರಬೇಕು ಮಾದರಿಗಳ ಪ್ರದರ್ಶನದಲ್ಲಿ ವಾಸ್ತುಶಿಲ್ಪಿ ಆಕರ್ಷ್‌ ಶಾಮನೂರು (ಕನ್ನಡಕಧಾರಿ) ಸಾರ್ವಜನಿಕರಿಗೆ ಮಾಹಿತಿ ನೀಡಿದರು.
ದಾವಣಗೆರೆಯ ರೋಟರಿ ಬಾಲಭವನದಲ್ಲಿ ಶನಿವಾರ ಆಯೋಜಿಸಿದ್ದ ಸರ್ಕಾರಿ ಕಟ್ಟಡಗಳು ಹೇಗಿರಬೇಕು ಮಾದರಿಗಳ ಪ್ರದರ್ಶನದಲ್ಲಿ ವಾಸ್ತುಶಿಲ್ಪಿ ಆಕರ್ಷ್‌ ಶಾಮನೂರು (ಕನ್ನಡಕಧಾರಿ) ಸಾರ್ವಜನಿಕರಿಗೆ ಮಾಹಿತಿ ನೀಡಿದರು.   

ದಾವಣಗೆರೆ: ಅದೊಂದು ಆಕರ್ಷಕ ಕಟ್ಟಡ. ಜನರನ್ನು ಕೈಬೀಸಿ ಕರೆಯುವಂಥ ವಿನ್ಯಾಸ. ಇದು ಸರ್ಕಾರಿ ಕಟ್ಟಡವೇ ಎಂಬ ಬೆರಗು ಮೂಡಿಸುವಂತಹ ವಾಸ್ತುಶಿಲ್ಪ. ಸಾರ್ವಜನಿಕ ಸೇವೆಯ ಮಹಲಿಗೆ ಅತ್ಯಾಧುನಿಕತೆ ಸ್ಪರ್ಶ.

– ಇಂತಹ ಕಟ್ಟಡಗಳ ಮಾದರಿಗಳು ಕಂಡುಬಂದದ್ದು ನಗರದ ರೋಟರಿ ಬಾಲ ಭವನದಲ್ಲಿ. ‘ನಾಗರಿಕ ವ್ಯವಸ್ಥೆಯ ವಾಸ್ತುಶಿಲ್ಪ’ ಶೀರ್ಷಿಕೆಯಡಿ ವಾಸ್ತುಶಿಲ್ಪಿ ಆಕರ್ಷ್‌ ಶಾಮನೂರು ಅವರು ಶನಿ ವಾರ ಪ್ರದರ್ಶಿಸಿದ ಕಟ್ಟಡಗಳ ಮಾದರಿ ಗಳು ಸಾರ್ವಜನಿಕರ ಗಮನಸೆಳೆದವು. ಹೊಸದೊಂದು ಕಲ್ಪನೆಗೆ ಜೀವ ನೀಡಿ ಆಕರ್ಷಕವಾಗಿ ಮಾದರಿ ರೂಪಿಸಿದ ಆಕರ್ಷ್‌ ಪ್ರಯತ್ನ ಮೆಚ್ಚುಗೆಗೆ ಪಾತ್ರ ವಾಯಿತು.

‘ಸರ್ಕಾರಿ ಕಟ್ಟಡಗಳು ಪ್ರಸ್ತುತ ಅಧಿಕಾರ ತೋರುವ ರೀತಿಯಲ್ಲಿ ನಿರ್ಮಾ ಣವಾಗಿವೆ. ಇದು ಸರಿಯಲ್ಲ. ಕಟ್ಟಡಗಳು ಗೌರವ ತೋರಿಸುವಂತಿರಬೇಕು; ಸಾರ್ವಜನಿಕರನ್ನು ಆಹ್ವಾನಿಸುವಂತಿ ರಬೇಕು. ಕಟ್ಟಡಗಳು ನಮ್ಮ ಸಮಾಜ ವನ್ನು ಪ್ರತಿಬಿಂಬಿಸುತ್ತವೆ ಎಂಬುದನ್ನು ಮರೆಯಬಾರದು’ ಎನ್ನುತ್ತಾರೆ ಆಕರ್ಷ್‌ ಶಾಮನೂರು.

‘ಸರ್ಕಾರಿ ಕಟ್ಟಡ ನೋಡಿದರೆ ಒಳಗೆ ಹೋಗೋಣ ಎನಿಸುವಂತಿರಬೇಕು. ಆದರೆ, ಈಗ ಹೀಗಾಗುತ್ತಿಲ್ಲ. ಪಾಲಿಕೆಯ ಕಟ್ಟಡವನ್ನು ಜನಾಕರ್ಷಕವಾಗಿ ರೂಪಿ ಸಲು ಅವಕಾಶವಿದೆ. ಕಟ್ಟಡದ ಮಧ್ಯ ಭಾಗದಲ್ಲಿಯೇ ಕಾರ್ಯಕ್ರಮ ಆಯೋ ಜಿಸಲು ಜಾಗವಿರಬೇಕು’ ಎಂದರು.

‘ಯಾವುದೇ ಸರ್ಕಾರಿ ಕಟ್ಟಡ ನಿರ್ಮಿ ಸುವ ಮುನ್ನ ಸಾರ್ವಜನಿಕರ ಸಹಭಾಗಿತ್ವ ಪಡೆಯಬೇಕು. ಅಭಿಪ್ರಾಯ ಆಲಿಸ ಬೇಕು. ಜನಾಭಿಪ್ರಾಯ ಆಧಾರಿತ ಯೋಜನೆ ರೂಪಿಸಬೇಕು. ಈ ಹಿನ್ನೆಲೆ ಯಲ್ಲಿ ಪಾಲಿಕೆ ಕಟ್ಟಡವನ್ನು ‘ಹೀಗೂ ನಿರ್ಮಿಸಬಹುದು’ ಎಂಬ ವಿಷಯ ನಗರ ದಲ್ಲಿ ಚರ್ಚೆಯಾಗಲಿ ಎಂದು ವಿನೂತನ ಮಾದರಿ ಪ್ರದರ್ಶಿಸಿದ್ದೇನೆ’ ಎಂದರು.

‘ಬೆಂಗಳೂರಿನ ಆರ್‌.ವಿ. ಎಂಜಿನಿಯ ರಿಂಗ್‌ ಕಾಲೇಜಿನಲ್ಲಿ ಪದವಿ ಮುಗಿಸಿರುವ ಅವರು, ‘ನಗರ ನಿರ್ವಹಣೆ ಹಾಗೂ ಅಭಿ ವೃದ್ಧಿ’ ಒಂದು ವರ್ಷದ ಕೋರ್ಸ್‌ ಮಾಡಲು ನೆದರ್‌ಲೆಂಡ್‌ಗೆ ಹೋಗುತ್ತಿ ದ್ದೇನೆ. ಕೋರ್ಸ್‌ ಮುಗಿದ ನಂತರ ಇಲ್ಲಿಗೆ ಬಂದು ನಗರದಲ್ಲಿ ಎಲ್ಲ ಕ್ಷೇತ್ರದ ಪ್ರಮು ಖರನ್ನು ಒಳಗೊಂಡ ಸಮಿತಿ ರಚಿಸು ವುದು, ನಗರದ ಮೂಲಸೌಲಭ್ಯ ವೃದ್ಧಿಗೆ ಚರ್ಚಿಸಿ, ಯೋಜನೆ ರೂಪಿಸುವ ಉದ್ದೇಶ ಹೊಂದಿದ್ದೇನೆ. ದಾವಣಗೆರೆಯಲ್ಲಿ ಹುಟ್ಟಿ ಬೆಳೆದ ವನು ನಾನು. ಇತರ ಊರು ಹಾಗಿರಬೇಕು ಎಂಬುದಕ್ಕಿಂತ ನಮ್ಮೂ ರಲ್ಲೂ ಹೀಗೆಲ್ಲಾ ಇರಬೇಕು ಎಂದು ನಾನು ಬಯಸುತ್ತೇನೆ. ಇದಕ್ಕೆ ಸಾರ್ವಜ ನಿಕರಲ್ಲಿ ಅರಿವು ಮೂಡಿಸುವುದಷ್ಟೇ ನನ್ನ ಉದ್ದೇಶ. ಜಿಲ್ಲಾ ಉಸ್ತುವಾರಿ ಸಚಿವರೂ ಆದ ಅಜ್ಜ ಶಾಮನೂರು ಶಿವಶಂಕರಪ್ಪ ಅವರೊಂದಿಗೆ ಈ  ವಿಷಯದ ಬಗ್ಗೆ ಚರ್ಚಿಸಿದ್ದೇನೆ. ಆದರೆ, ಸಾರ್ವಜನಿಕ ವಲ ಯದಲ್ಲಿ ಈ ವಿಷಯ ಚರ್ಚೆಯಾಗಬೇಕು ಎಂಬುದು ನನ್ನ ಬಯಕೆ. ‘ಬೆಂಗಳೂರು ಬೆಳೆದಿದೆ. ರಾಜ್ಯದ 2ನೇ ಹಂತದ ನಗರಗಳನ್ನು ಬೆಳೆಸಬೇಕು. ಬೆಂಗಳೂರಿ ನಂತೆಯೇ ಇತರ ನಗರಗಳು ಆಗುವುದಕ್ಕೆ ಬಿಡಬಾರದು’ ಎಂಬ ಕಾಳಜಿ ಅವರದು.

ಆಕರ್ಷ್‌ ಅವರನ್ನು ಸಂಪರ್ಕಿಸಲು ಮೊಬೈಲ್‌: 97406 99399ಗೆ ಕರೆ ಮಾಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.