
ಪ್ರಜಾವಾಣಿ ವಾರ್ತೆಬೆಂಗಳೂರು: ದಾವಣಗೆರೆ ವಿಶ್ವವಿದ್ಯಾ ಲಯಕ್ಕೆ ಕುಲಪತಿ ಆಯ್ಕೆ ಸಂಬಂಧ ಈ ಬಾರಿ ವಿನೂತನ ಮಾದರಿಯೊಂದನ್ನು ಅನುಸರಿಸಲು ಆಯ್ಕೆ ಸಮಿತಿ ತೀರ್ಮಾ ನಿಸಿದೆ. ಇದರ ಅನ್ವಯ, ಕುಲಪತಿ ಹುದ್ದೆಯ ಆಕಾಂಕ್ಷಿಗಳ ಜೊತೆ ಸಂವಾದ ನಡೆಸಲು ಸಮಿತಿ ನಿರ್ಧರಿಸಿದೆ.
ಕುಲಪತಿ ಹುದ್ದೆ ಬಯಸಿ ಅಂದಾಜು 100 ಅರ್ಜಿಗಳು ಬಂದಿದ್ದವು. ಅವುಗ ಳನ್ನು ಪರಿಶೀಲಿಸಲಾಗಿದ್ದು, ಅಂದಾಜು 16 ಮಂದಿ ಅರ್ಜಿಗಳು ಅಂತಿಮ ಹಂತ ದಲ್ಲಿ ಉಳಿದುಕೊಂಡಿವೆ. ಇಷ್ಟೂ ಜನರ ಜೊತೆ ಸಂವಾದ ನಡೆಸುವ ಉದ್ದೇಶ ಸಾಹಿತಿ ಯು.ಆರ್. ಅನಂತಮೂರ್ತಿ ನೇತೃತ್ವದ ಆಯ್ಕೆ ಸಮಿತಿಗೆ ಇದೆ ಎಂದು ಮೂಲಗಳು ತಿಳಿಸಿವೆ.
ಸಂವಾದ ಡಿ. 3ರಂದು ನಡೆಯಲಿದೆ ಎನ್ನಲಾಗಿದೆ. ಸಂವಾದದ ನಂತರ, ಮೂರು ಜನರ ಹೆಸರನ್ನು ಸಮಿತಿ ಸರ್ಕಾ ರಕ್ಕೆ ಕಳುಹಿಸಲಿದೆ. ಇವರಲ್ಲಿ ಯಾರನ್ನು ಕುಲಪತಿ ಹುದ್ದೆಗೆ ಆಯ್ಕೆ ಮಾಡಬೇಕು ಎಂಬುದನ್ನು ಸರ್ಕಾರ ನಿರ್ಧರಿಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.