ADVERTISEMENT

ದೇವದಾಸಿಯರ ಪುನರ್ವಸತಿ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2012, 19:30 IST
Last Updated 10 ಫೆಬ್ರುವರಿ 2012, 19:30 IST

ದಾವಣಗೆರೆ: ರಾಜ್ಯದಲ್ಲಿ ದೇವದಾಸಿಯರ ಪುನರ್ವಸತಿ ಯೋಜನೆಯನ್ನು ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ ಹಾಗೂ ಯಾದಗಿರಿ ಜಿಲ್ಲೆಗಳಿಗೆ ವಿಸ್ತರಿಸಲಾಗಿದೆ. ಈ ಜಿಲ್ಲೆಗಳ ಅರ್ಹ ಮಾಜಿ ದೇವದಾಸಿಯರಿಗೆ ಸರ್ಕಾರದಿಂದ ಮಾಸಾಶನ ಮಂಜೂರಾಗಿದೆ.

ರಾಜ್ಯದಲ್ಲಿ 1993-94ರಲ್ಲಿ ನಡೆಸಿದ ಸಮೀಕ್ಷೆಯಲ್ಲಿ 22,873 ದೇವದಾಸಿಯರನ್ನು ಗುರುತಿಸಲಾಗಿತ್ತು. ಈ ಪೈಕಿ, 15,435 ಮಂದಿ ಅರ್ಹ ಮಾಜಿ ದೇವದಾಸಿಯರು ಮಾಸಾಶನ ಪಡೆಯುತ್ತಿದ್ದಾರೆ. 2007-08ರಲ್ಲಿ ನಡೆಸಿದ ಸಮೀಕ್ಷೆ ಪ್ರಕಾರ, 23,787 ಮಂದಿ ಮಾಜಿ ದೇವದಾಸಿಯರನ್ನು ಗುರುತಿಸಲಾಗಿದೆ.

ಈ ಪೈಕಿ, 13,879 ಮಂದಿ 45 ವರ್ಷ ಮೀರಿದ ಮಾಜಿ ದೇವದಾಸಿಯರನ್ನು ಮಾಸಾಶನಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ. ಇಲಾಖೆ ಸಲ್ಲಿಸಿದ್ದ ಪಟ್ಟಿಗೆ ಸರ್ಕಾರ ಅನುಮೋದನೆ ನೀಡಿದ್ದು, ಅನುದಾನ ಮಂಜೂರಾಗಿದೆ ಎಂದು ದೇವದಾಸಿಯರ ಪುನರ್ವಸತಿ ಯೋಜನೆ ಅಧಿಕಾರಿ ಮೋಕ್ಷಪತಿ ಮಾಹಿತಿ ನೀಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.