ADVERTISEMENT

ನಗದಿನಲ್ಲಿ ಪತಿ, ಸಾಲದಲ್ಲಿ ಪತ್ನಿ ಮುಂದು !

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2014, 19:30 IST
Last Updated 19 ಮಾರ್ಚ್ 2014, 19:30 IST

ಮೈಸೂರು: ಪತಿ ಹೆಸರಲ್ಲಿ ₨ 3 ಲಕ್ಷ ನಗದು, ₨25 ಸಾವಿರ ಸಾಲ. ಅದೇ ಪತ್ನಿ ಹೆಸರಲ್ಲಿ ₨ 25 ಸಾವಿರ ನಗದು, ರೂ 1,25,000 ಸಾಲ !

ಇದು ಬುಧವಾರ ಜೆಡಿ (ಯು) ಹೆಸರಿನಲ್ಲಿ ನಾಮಪತ್ರ ಸಲ್ಲಿಸಿದ ಎಸ್‌.ಪಿ. ಮಹದೇವಪ್ಪ ಅವರ ಆಸ್ತಿ ವಿವರದಲ್ಲಿ ಕೌತುಕ ಅಂಶ.
ನಗದಿನ ಪ್ರಮಾಣ ಪತಿ ಹೆಸರಲ್ಲಿ ಹೆಚ್ಚು ಪತ್ನಿ ಹೆಸರಲ್ಲಿ ಕಡಿಮೆ. ಹಾಗೆಯೇ, ಸಾಲದ ವಿಚಾರದಲ್ಲಿ ಪತಿ ಹೆಸರಲ್ಲಿ ಕಡಿಮೆ, ಪತ್ನಿ ಹೆಸರಲ್ಲಿ ಹೆಚ್ಚು ಸಾಲವಿದೆ.

ಆದರೆ, ಆಭರಣದ ವಿಚಾರದಲ್ಲಿ ಮಾತ್ರ ಇಬ್ಬರೂ ಸರಿಸಮಾನರು. ಇಬ್ಬರ ಬಳಿ 100 ಗ್ರಾಂ ಚಿನ್ನಾಭರಣಗಳಿವೆ. ಆದರೆ, ಕೃಷಿಭೂಮಿ ವಿಚಾರದಲ್ಲಿ ಪತಿಗಿಂತ ಪತ್ನಿಯೇ ಒಂದು ಕೈ ಮೇಲು. ಪತಿಯ ಬಳಿ 2.40 ಎಕರೆ ಹಾಗೂ  60 ಸೆಂಟ್ ಭೂಮಿ ಇದ್ದರೆ, ಪತ್ನಿ ಹೆಸರಿನಲ್ಲಿ  2.12 ಎಕರೆ, 1.00 ಎಕರೆ ಹಾಗೂ 80 ಸೆಂಟ್ ಭೂಮಿ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.