ಬೆಂಗಳೂರು (ಪಿಟಿಐ): ನಟ ದರ್ಶನ್ ಕುಟುಂಬ ಕಲಹದ ಹಿನ್ನೆಲೆಯಲ್ಲಿ ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘವು ನಟಿ ನಿಖಿತಾ ಮೇಲೆ ಹೇರಿದ್ದ ಮೂರು ವರ್ಷಗಳ ನಿಷೇಧವನ್ನು ಗುರುವಾರ ವಾಪಸ್ ತೆಗೆದುಕೊಂಡಿದೆ.
ನಿಷೇಧ ಹೇರಿದ್ದ ಕ್ರಮಕ್ಕೆ ನಿಖಿತಾ ಅವರಲ್ಲಿ ಕ್ಷಮೆ ಕೇಳಿರುವ ಸಂಘವು ಇದೊಂದು ಆತುರದ ಕ್ರಮವೆಂದು ಹೇಳಿದೆ.
ಸಂಘದ ಅಧ್ಯಕ್ಷ ಮುನಿರತ್ನ ನಾಯ್ಡು ಅವರು ನಿಖಿತಾ ಮೇಲೆ ನಿಷೇಧ ಹೇರಿದ್ದು ಆತುರದ ಹಾಗೂ ಮೂರ್ಖತನದ ಕ್ರಮವಾಗಿತ್ತು. ಒಳ್ಳೆಯ ನಡವಳಿಕೆ ಹೊಂದಿರುವ ಅವರು ಇದೀಗ ಕನ್ನಡ ಭಾಷೆಯ ಯಾವುದೇ ಸಿನಿಮಾದಲ್ಲೂ ನಟಿಸಬಹುದು ಎಂದು ಸುದ್ದಿಗಾರರಿಗೆ ತಿಳಿಸಿದರು.
ಪತ್ನಿ ಮೇಲೆ ಹಲ್ಲೆ ನಡೆಸಿ ನಟ ದರ್ಶನ್ ಬಂಧಿತರಾದ ನಂತರ ನಟಿ ನಿಖಿತಾ ಮೇಲೆ ನಿರ್ಮಾಪಕರ ಸಂಘವು ನಿಷೇಧ ಹೇರಿತ್ತು. ನಂತರ ಇದಕ್ಕೆ ಭಾರಿ ವಿರೋಧ ವ್ಯಕ್ತವಾಗಿತ್ತು. ನಟ ಶಿವರಾಜ್ ಕುಮಾರ್ ಸಹ ಈ ಕ್ರಮವನ್ನು ಖಂಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.