ADVERTISEMENT

ನಟ ಕಾಶಿ ಇನ್ನಿಲ್ಲ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2016, 19:30 IST
Last Updated 6 ಆಗಸ್ಟ್ 2016, 19:30 IST
ನಟ ಕಾಶಿ ಇನ್ನಿಲ್ಲ
ನಟ ಕಾಶಿ ಇನ್ನಿಲ್ಲ   

ಬೆಂಗಳೂರು: ಕನ್ನಡ ಚಿತ್ರರಂಗದ  ಹಿರಿಯ ನಟ, ರಂಗಕರ್ಮಿ ಸಂಕೇತ್‌ ಕಾಶಿ (50) ಅವರು ಅನಾರೋಗ್ಯದಿಂದಾಗಿ ವಿಜಯನಗರದ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ನಿಧನ ಹೊಂದಿದರು. ವಿಜಯನಗರದ ಮೂಡಲಪಾಳ್ಯದಲ್ಲಿ ನೆಲೆಸಿದ್ದ ಅವರು, ಅವಿವಾಹಿತರಾಗಿದ್ದರು. ಅವರಿಗೆ ತಾಯಿ ಇದ್ದಾರೆ.

ಕನ್ನಡದ ‘ನಮ್ಮೂರ ಮಂದಾರ ಹೂವೇ’, ‘ಮನೆದೇವ್ರು’,  ‘ಅಣ್ಣಯ್ಯ’, ‘ಮಾಂಗಲ್ಯಂ ತಂತು ನಾನೇನಾ...’ ‘ಉಲ್ಟಾಪಲ್ಟಾ’ ಸೇರಿದಂತೆ ಸುಮಾರು 115ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು. ಇನ್ನೂ ಬಿಡುಗಡೆಯಾಗದ ಪುನೀತ್‌ ರಾಜ್‌ಕುಮಾರ್‌ ಅವರ ‘ರಾಜ್‌ಕುಮಾರ್’ ಚಿತ್ರದಲ್ಲೂ ಅವರು ಅಭಿನಯಿಸಿದ್ದರು. ‘ಬನಶಂಕರಿಯ ರುದ್ರಭೂಮಿಯಲ್ಲಿ ಭಾನುವಾರ (ಆಗಸ್ಟ್‌ 7ರಂದು) ಬೆಳಿಗ್ಗೆ 10.30ಕ್ಕೆ ಅಂತ್ಯಕ್ರಿಯೆ ನಡೆಯಲಿದೆ’ ಎಂದು ಕುಟುಂಬದವರು ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.