ADVERTISEMENT

ನಟ ದರ್ಶನ್ ಚೇತರಿಕೆ:ಇಂದು ಜೈಲಿಗೆ ವಾಪಸ್?

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2011, 19:30 IST
Last Updated 16 ಸೆಪ್ಟೆಂಬರ್ 2011, 19:30 IST

ಬೆಂಗಳೂರು: ನಟ ದರ್ಶನ್ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಅವರನ್ನು ಶನಿವಾರ ಕಾರಾಗೃಹಕ್ಕೆ ಕಳುಹಿಸುವ ಸಾಧ್ಯತೆ ಇದೆ.

`ದರ್ಶನ್ ಅವರ ಆರೋಗ್ಯದಲ್ಲಿ ಸುಧಾರಣೆ ಆಗಿದೆ. ಅವರನ್ನು ತಪಾಸಣೆಗೆ ಒಳಪಡಿಸಿದ ನಂತರ ಡಿಸ್ಚಾರ್ಜ್ ಮಾಡಲಾಗುತ್ತದೆ~ ಎಂದು ರಾಜೀವ್‌ಗಾಂಧಿ ಎದೆ ರೋಗಗಳ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

`ದರ್ಶನ್ ಅವರನ್ನು ನಿಮ್ಹಾನ್ಸ್‌ನಿಂದ ಕರೆದುಕೊಂಡು ಬಂದಿದ್ದರಿಂದ ನಿಮ್ಹಾನ್ಸ್ ವೈದ್ಯರಿಗೆ ಪತ್ರ ಬರೆಯಲಾಗುತ್ತದೆ. ಅವರು ಇಲ್ಲಿಗೆ ಬಂದು ದರ್ಶನ್ ಅವರನ್ನು ತಪಾಸಣೆ ನಡೆಸಬಹುದು ಅಥವಾ ದರ್ಶನ್ ಅವರನ್ನೇ ಅಲ್ಲಿಗೆ ಕರೆದೊಯ್ಯಬಹುದು. ಜೈಲು ಅಧಿಕಾರಿಗಳು ಈ ಬಗ್ಗೆ ನಿರ್ಧಾರ ಕೈಗೊಳ್ಳುತ್ತಾರೆ~ ಎಂದು ವೈದ್ಯರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.