ADVERTISEMENT

ನಬಾಪುರಕ್ಕೆ ಯೋಧನ ಪಾರ್ಥಿವ ಶರೀರ

ಬಸವರಾಜ ಚನ್ನಪ್ಪ ಪಾಟೀಲ ಅಂತಿಮ ದರ್ಶನ ಪಡೆದ ಜನ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2016, 7:00 IST
Last Updated 1 ಆಗಸ್ಟ್ 2016, 7:00 IST
ನಬಾಪುರಕ್ಕೆ ಯೋಧನ ಪಾರ್ಥಿವ ಶರೀರ
ನಬಾಪುರಕ್ಕೆ ಯೋಧನ ಪಾರ್ಥಿವ ಶರೀರ   

ಬೆಳಗಾವಿ: ಜಮ್ಮು–ಕಾಶ್ಮೀರ ಗಡಿ ಭಾಗದಲ್ಲಿ ಸಂಭವಿಸಿದ ಬಾಂಬ್‌ ಸ್ಫೋಟದಲ್ಲಿ ಸಾವಿಗೀಡಾದ ಯೋಧ ರಾಜ್ಯದ ಬಸವರಾಜ ಚನ್ನಪ್ಪ ಪಾಟೀಲ(44) ಅವರ ಪಾರ್ಥೀವ ಶರೀರವನ್ನು ಸೋಮವಾರ ಅವರ ಹುಟ್ಟೂರು ಬೆಳಗಾವಿ ಜಿಲ್ಲೆ ನಬಾಪುರಕ್ಕೆ ತರಲಾಗಿದೆ.

ಪಾರ್ಥೀವ ಶರೀರವನ್ನು ಬೆಳಿಗ್ಗೆ ಗೋವಾ ವಿಮಾನ ನಿಲ್ದಾಣಕ್ಕೆ ತರಲಾಯಿತು. ಅಲ್ಲಿಂದ ರಸ್ತೆ ಮಾರ್ಗವಾಗಿ ಗೋಕಾಕ ಸಮೀಪದ ನಬಾಪುರ/ಖನಗಾಂವಕ್ಕೆ ಬೆಳಿಗ್ಗೆ 11.30ಕ್ಕೆ ತರಲಾಗಿದ್ದು, ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗಿತ್ತು.  ಬಸವರಾಜ ಚನ್ನಪ್ಪ ಪಾಟೀಲ ಅವರು ಕಲಿತ ಶಾಲೆಯಲ್ಲಿ ಗೌರವಾರ್ಥವಾಗಿ ಕೆಲ ಹೊತ್ತು ಇರಿಸಲಾಗಿತ್ತು. ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ದರ್ಶನ ಪಡೆದರು. 

ಬಳಿಕ, ನಬಾಪುರ/ಖನಗಾಂವ ಗ್ರಾಮದಲ್ಲಿ ಪಾರ್ಥಿವ ಶರೀರದ ಮೆರವಣಿಗೆ ನಡೆಸಲಾಗುತ್ತಿದೆ. ಮಧ್ಯಾಹ್ನದ ವೇಳೆಗೆ ಅಂತ್ಯಕ್ರಿಯೆ ನಡೆಯಲಿದೆ. ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ.

ಯೋಧ ಬಸವರಾಜ ಚನ್ನಪ್ಪ ಪಾಟೀಲ ಅವರು ಮದ್ರಾಸ್‌ ರೆಜಿಮೆಂಟ್‌ನಲ್ಲಿ ಸುಬೇದಾರ್‌ ಹುದ್ದೆಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.