ADVERTISEMENT

ನವೋದಯ ಪರೀಕ್ಷೆ ದಿಢೀರ್‌ ಬದಲಾವಣೆ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2014, 19:30 IST
Last Updated 14 ಮಾರ್ಚ್ 2014, 19:30 IST

ಬೆಂಗಳೂರು: ನವೋದಯ ವಿದ್ಯಾಲಯ­ಗಳ 9 ಮತ್ತು 10ನೇ ತರಗತಿಯ ವಾರ್ಷಿಕ ಪರೀಕ್ಷೆ ವೇಳಾಪಟ್ಟಿ ಏಕಾಏಕಿ ಬದಲಾಗಿದೆ. ಮೊದಲ ದಿನವಾದ ಶನಿವಾರ ಕನ್ನಡ ಪರೀಕ್ಷೆ ನಡೆಯಲಿದೆ.

ಮೊದಲಿನ ಪಟ್ಟಿ ಪ್ರಕಾರ ಶನಿವಾರ 9ನೇ ತರಗತಿಗೆ ಗಣಿತ ಮತ್ತು 10ನೇ ತರಗತಿಗೆ ವಿಜ್ಞಾನ ಪರೀಕ್ಷೆ ನಡೆಯ­ಬೇಕಾಗಿತ್ತು.

ದಿಢೀರ್‌ ಬದಲಾವಣೆಯಿಂದ ಮಕ್ಕಳು ಗೊಂದಲ, ಮಾನಸಿಕ ಒತ್ತಡಕ್ಕೆ  ಒಳಗಾಗಲಿದ್ದಾರೆ ಎಂದು ಚಿಂತಾಮಣಿ ತಾಲ್ಲೂಕಿನ ಏನಿಗದೆಲೆಯ ನವೋದಯ ಶಾಲೆಯ ಶಿಕ್ಷಕ ರವಿಕುಮಾರ್ ಬೇಸರ ವ್ಯಕ್ತಪಡಿಸಿದರು.

ಸಿಬಿಎಸ್‌ಇ  ಶಾಲೆಗಳಿಗೂ ಪರಿಷ್ಕೃತ ವೇಳಾಪಟ್ಟಿ ಅನ್ವಯಿಸಲಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.