ಶಿವಮೊಗ್ಗ (ಪಿಟಿಐ): ಕರ್ನಾಟಕದ ನಾಯಕತ್ವ ಪ್ರಶ್ನೆ ಬಗೆ ಹರಿದಿದ್ದು ಸದಾನಂದ ಗೌಡ ಅವರೇ ಉಳಿದ ಅವಧಿಗೆ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಅವರು ಶನಿವಾರ ಇಲ್ಲಿ ಪ್ರತಿಪಾದಿಸಿದರು.
~ಕೇಂದ್ರ ನಾಯಕರು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಜೊತೆಗೆ ಮಾತನಾಡಿದ್ದಾರೆ ಮತ್ತು ನಾಯಕತ್ವ ಪ್ರಶ್ನೆ ಬಗೆ ಹರಿದಿದೆ~ ಎಂದು ಅವರು ವರದಿಗಾರರಿಗೆ ತಿಳಿಸಿದರು.
ಮಾರ್ಚ್ 30ರಂದು ಮುಕ್ತಾಯಗೊಳ್ಳಲಿರುವ ಮುಂಗಪತ್ರ ಅಧಿವೇಶನದ ನಂತರ ಸಂಪುಟ ವಿಸ್ತರಣೆ ಮತ್ತು ಮಂಡಳಿ ಹಾಗೂ ನಿಗಮಗಳಿಗೆ ನೇಮಕಾತಿ ನಡೆಯಲಿದೆ ಎಂದು ಪ್ರಶ್ನೆಯೊಂದಕ್ಕೆ ಈಶ್ವರಪ್ಪ ಉತ್ತರಿಸಿದರು.
ಈ ಮಧ್ಯೆ ವೈದ್ಯಕೀಯ ಶಿಕ್ಷಣ ಸಚಿವ ಎ.ರಾಮದಾಸ್ ಅವರು ಪಕ್ಷದಲ್ಲಿನ ಬಿಕ್ಕಟ್ಟು ಏಪ್ರಿಲ್ 15ರ ವೇಳೆಗೆ ಅಂತ್ಯಗೊಳ್ಳುವುದು ಎಂದು ಹೇಳಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಬಿಕ್ಕಟ್ಟು ಇತ್ಯರ್ಥದ ಬಳಿಕ ಬಿಜೆಪಿಗೆ ಧಕ್ಕೆ ಉಂಟು ಮಾಡಿದ ರಾಜಕೀಯ ಬೆಳವಣಿಗೆಗಳ ಬಗ್ಗೆ ವಿಷಾದ ವ್ಯಕ್ತ ಪಡಿಸುವ ಸಲುವಾಗಿ ಪಕ್ಷದ ನಾಯಕರು ರಾಜ್ಯವ್ಯಾಪಿ ಪ್ರವಾಸ ಮಾಡಲಿದ್ದಾರೆ ಎಂದು ಅವರು ವರದಿಗಾರರ ಜೊತೆ ಮಾತನಾಡುತ್ತಾ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.