ADVERTISEMENT

ನೈರುತ್ಯ ಮುಂಗಾರು ಕ್ಷೀಣ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2013, 19:59 IST
Last Updated 22 ಸೆಪ್ಟೆಂಬರ್ 2013, 19:59 IST

ಬೆಂಗಳೂರು: ಭಾನುವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ರಾಜ್ಯದ ಉತ್ತರ ಒಳನಾಡಿನಲ್ಲಿ ನೈರುತ್ಯ ಮುಂಗಾರು ಕ್ಷೀಣಿಸಿದೆ. ಕರಾವಳಿಯ ಹಲವು ಪ್ರದೇಶಗಳು, ಉತ್ತರ ಮತ್ತು ದಕ್ಷಿಣ ಒಳನಾಡಿನ ಕೆಲವು ಪ್ರದೇಶಗಳಲ್ಲಿ ಮಳೆಯಾಗಿದೆ.

ಕೊಲ್ಲೂರಿನಲ್ಲಿ 7 ಸೆಂ.ಮೀ. ಮಳೆ­ಯಾ­ಗಿದೆ. ಕದ್ರಾ 5, ಅಂಕೋಲಾ, ಆಗುಂಬೆ, ಕೊಟ್ಟಿಗೆಹಾರ 4, ಮೂಡು­ಬಿದರೆ, ಧರ್ಮಸ್ಥಳ, ಉಡುಪಿ, ಗೋಕರ್ಣ, ಶಿರಸಿ 3, ಬೆಳ್ತಂಗಡಿ, ಪುತ್ತೂರು, ಕಾರ್ಕಳ, ಸಿದ್ದಾಪುರ, ಕಾರ­ವಾರ, ಶಿರಾಲಿ, ಗೇರುಸೊಪ್ಪ, ಕುಮಟಾ, ಭಾಗಮಂಡಲ, ಮೂರ್ನಾಡು, ಲಿಂಗನಮಕ್ಕಿ, ತಾಳ ಗುಪ್ಪ, ತೀರ್ಥಹಳ್ಳಿ, ಶೃಂಗೇರಿ, ಮೂಡಿಗೆರೆ, ಕಮ್ಮರಡಿ 2, ಮಂಗ­ಳೂರು, ಉಪ್ಪಿನಂಗಡಿ, ಪಣಂಬೂರು, ಕೋಟ, ಬನವಾಸಿ, ಮಡಿಕೇರಿ, ನಾಪೋಕ್ಲು, ಸೋಮವಾರಪೇಟೆ, ಸಾಗರ, ಕಳಸ, ಸಕಲೇಶಪುರ, ತಿ.ನರಸೀಪುರದಲ್ಲಿ ತಲಾ 1 ಸೆಂ.ಮೀ. ಮಳೆಯಾಗಿದೆ.

ಮುನ್ಸೂಚನೆ: ಮುಂದಿನ 48 ಗಂಟೆಗಳಲ್ಲಿ ಕರಾವಳಿಯ ಜಿಲ್ಲೆಗಳು, ದಕ್ಷಿಣ ಒಳನಾಡಿನ ಘಟ್ಟ ಪ್ರದೇಶಗಳಲ್ಲಿ ಭಾರಿ ಮಳೆಯಾಗುವ ಸಂಭವವಿದೆ. ಉತ್ತರ ಮತ್ತು ದಕ್ಷಿಣ ಒಳನಾಡಿನ ಕೆಲವು ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.