ADVERTISEMENT

ನೋಂದಾಯಿತ ಕಾರ್ಮಿಕರ ಕುಟುಂಬಕ್ಕೆ ರೂ 2 ಲಕ್ಷ ಪರಿಹಾರ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2013, 19:30 IST
Last Updated 17 ನವೆಂಬರ್ 2013, 19:30 IST

ಹೂವಿನಹಡಗಲಿ (ಬಳ್ಳಾರಿ ಜಿಲ್ಲೆ): ಬೆಳಗಾವಿ ಜಿಲ್ಲೆಯಲ್ಲಿ ಶನಿವಾರ ಸಂಭವಿಸಿದ ಕ್ಯಾಂಟರ್‌ ಅಪಘಾತದಲ್ಲಿ ಮೃತಪಟ್ಟ ಯಾದಗಿರಿ ಜಿಲ್ಲೆಯ ಸುರಪುರದ 22 ಮಂದಿ ಕೂಲಿ ಕಾರ್ಮಿಕರ ಕುಟುಂಬಗಳಿಗೆ ಇಲಾಖೆ­ಯಿಂದ ಪರಿಹಾರ ನೀಡುವುದಾಗಿ ಕಾರ್ಮಿಕ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ್‌ ಘೋಷಿಸಿದರು.

‘ಮೃತಪಟ್ಟವರಲ್ಲಿ ನೋಂದಾಯಿತ ಕಾರ್ಮಿಕರಿದ್ದರೆ ಅವರ ಕುಟುಂಬಕ್ಕೆ ತಲಾ ₨ 2 ಲಕ್ಷ ಹಾಗೂ ನೋಂದಣಿ ಮಾಡಿಸದ ಕಾರ್ಮಿಕರಾಗಿದ್ದರೆ ತಲಾ ರೂ 50,000 ಪರಿಹಾರ ನೀಡಲಾಗುವುದು’ ಎಂದು ನಾಯ್ಕ ಭಾನುವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

‘ಈಗಾಗಲೇ ಸಕ್ಕರೆ ಸಚಿವ ಪ್ರಕಾಶ ಹುಕ್ಕೇರಿ ಸರ್ಕಾರದ ಪರವಾಗಿ ₨ 1 ಲಕ್ಷ ಪರಿಹಾರ ಘೋಷಿಸಿದ್ದಾರೆ. ಆದರೆ ಪರಿಹಾರವನ್ನು ಹೆಚ್ಚಿಸಬೇಕೆಂಬ ಮನವಿ ಬಂದ ಹಿನ್ನೆಲೆಯಲ್ಲಿ  ಮುಖ್ಯಮಂತ್ರಿ ಜೊತೆ ಚರ್ಚಿಸಿದ್ದೇನೆ. ಮುಖ್ಯ­ಮಂತ್ರಿಗಳು ಸಕಾರಾತ್ಮವಾಗಿ ಸ್ಪಂದಿಸಿದ್ದಾರೆ. ಇಲಾಖೆಯಿಂದಲೂ ಹೆಚ್ಚುವರಿಯಾಗಿ ಪರಿಹಾರ ನೀಡಲು ಚಿಂತನೆ ನಡೆದಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.