ADVERTISEMENT

ನೌಕರರ ವರ್ಗಾವಣೆ ನಿಯಮ ಬದಲು: ಅನುಮತಿ ಬಳಿಕ ಜಾರಿಗೆ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2013, 19:30 IST
Last Updated 19 ಡಿಸೆಂಬರ್ 2013, 19:30 IST

ಬೆಂಗಳೂರು: ನೌಕರ ದಂಪತಿಯ ವರ್ಗಾವಣೆ ಮೀಸಲು ಪ್ರಮಾಣವನ್ನು ಶೇಕಡ 1ರಿಂದ ಶೇ 3ಕ್ಕೆ ಹೆಚ್ಚಿಸುವ ನಿಯಮವನ್ನು ನ್ಯಾಯಾಲಯದ ಅನುಮತಿ ಪಡೆದ ಬಳಿಕವೇ ಜಾರಿಗೊ ಳಿಸಬೇಕು ಎಂದು ಹೈಕೋರ್ಟ್‌ ಗುರು ವಾರ ಸರ್ಕಾರಕ್ಕೆ ಸೂಚಿಸಿದೆ.

‘ಸರ್ಕಾರಿ ನೌಕರ ದಂಪತಿ ಬೇರೆ ಬೇರೆ ಊರುಗಳಲ್ಲಿ ಕೆಲಸ  ಮಾಡುವುದರಿಂದ ಕಾರ್ಯದಕ್ಷತೆ ಕುಸಿಯುವ ಸಾಧ್ಯತೆ ಇರುತ್ತದೆ. ನೌಕರ ದಂಪತಿಯನ್ನು ಪರಸ್ಪರ ದೂರ ಮಾಡುವುದರ ಬದಲಿಗೆ, ಸಾಧ್ಯವಾದಷ್ಟು ಹತ್ತಿರ ಇರುವುದಕ್ಕೆ ಅವಕಾಶ ನೀಡಿದರೆ ಒಳ್ಳೆಯದಾಗಬಹುದು.

ಈ ರೀತಿ ಅವಕಾಶ ಕಲ್ಪಿಸುವುದಕ್ಕೆ ಆದ್ಯತೆ ನೀಡಲು ಯೋಚಿಸಬೇಕು’ ಎಂದು ಅದು ಸರ್ಕಾರಕ್ಕೆ ಸಲಹೆ ಮಾಡಿದೆ. ನ್ಯಾಯಾಲಯದ ಗಮನಕ್ಕೆ ತರದೇ ವರ್ಗಾವಣೆ ಮೀಸಲು ನಿಯಮದಲ್ಲಿ ಬದಲಾವಣೆ ಮಾಡದಂತೆ ಹೈಕೋರ್ಟ್‌ ವಿಭಾಗೀಯ ಪೀಠವು ಈ ಅರ್ಜಿಯ ವಿಚಾರಣೆ ವೇಳೆ ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.