ADVERTISEMENT

ಪರಮೇಶ್ವರ್‌ ಪರ ಕರಪತ್ರ

​ಪ್ರಜಾವಾಣಿ ವಾರ್ತೆ
Published 6 ಜನವರಿ 2014, 19:30 IST
Last Updated 6 ಜನವರಿ 2014, 19:30 IST

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಾ.ಜಿ.­ಪರಮೇಶ್ವರ್‌ ಅವರಿಗೆ ಉಪ ಮುಖ್ಯ­ಮಂತ್ರಿ ಸ್ಥಾನ ನೀಡದಿದ್ದರೆ ಲೋಕ­ಸಭಾ ಚುನಾವಣೆಯಲ್ಲಿ ದಲಿತರು ಕಾಂಗ್ರೆಸ್‌ಗೆ ಬಹಿಷ್ಕಾರ ಹಾಕುತ್ತಾರೆ ಎಂದು ಸೋಮವಾರ ಕೆಪಿಸಿಸಿ ಕಚೇರಿಯಲ್ಲಿ ಕರಪತ್ರ ಹಂಚಲಾಗಿದೆ.


ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್‌ ಸಿಂಗ್‌  ಅಧ್ಯಕ್ಷತೆಯಲ್ಲಿ ಪ್ರದೇಶ ಕಾಂಗ್ರೆಸ್‌ ಸಮನ್ವಯ ಸಮಿತಿ ಸಭೆ ನಡೆಯುತ್ತಿರುವಾಗಲೇ ಕೊರಟ­ಗೆರೆಯ ಕೆಲವರು ಪರಮೇಶ್ವರ್‌ ಪರ ಕರಪತ್ರ ಹಂಚಿದರು. ತಾಲ್ಲೂಕು ಆದಿ­­ಜಾಂಬವ ಸಂಘದ ಅಧ್ಯಕ್ಷ ಎನ್‌.ಚಿಕ್ಕರಂಗಯ್ಯ ಸೇರಿದಂತೆ ಹಲ­ವರ ಹೆಸರು ಈ ಕರಪತ್ರದಲ್ಲಿದೆ. ರಾಜ್ಯ­ದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುವಲ್ಲಿ ಪರಮೇಶ್ವರ್‌ ಪಾತ್ರ ಹಿರಿದಾಗಿದ್ದು, ಅವರಿಗೆ ಸಂಪು­ಟ­­­ದಲ್ಲಿ ಸ್ಥಾನ ನೀಡದೇ ಕಡೆಗಣಿ­ಸ­ಲಾಗಿದೆ ಎಂದು ಕರಪತ್ರದಲ್ಲಿ ದೂರಲಾಗಿದೆ.

‘ಪರಮೇಶ್ವರ ಅವರಿಗೆ ಉಪ ಮುಖ್ಯ­ಮಂತ್ರಿ ಹುದ್ದೆ ನೀಡದಿದ್ದರೆ ಕಾಂಗ್ರೆಸ್‌ ಪಕ್ಷವನ್ನು ಬಹಿಷ್ಕರಿ­ಸುವ ಆಂದೋಲನವನ್ನು ಎಡಗೈ ಮತ್ತು ಬಲಗೈ ಪಂಗಡದ ದಲಿತರು ಒಟ್ಟಾಗಿ ಮಾಡು­ತ್ತೇವೆ. ಲೋಕಸಭಾ ಚುನಾ­ವ­­ಣೆ­­ಯಲ್ಲಿ ಕುರುಬರ ಮತ­ಗಳು ನಿರ್ಣಾ­ಯ­ಕವಲ್ಲ. ದಲಿತರ ಮತ­ಗಳೇ ನಿರ್ಣಾ­­ಯಕ ಎಂಬುದನ್ನು ಸಿದ್ದರಾಮಯ್ಯ ಮನವರಿಕೆ ಮಾಡಿ­ಕೊಳ್ಳ­ಬೇಕು’ ಎಂಬ ಆಗ್ರಹ ಅದರಲ್ಲಿದೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT