ADVERTISEMENT

ಪಾಂಡುರಂಗನ ದರ್ಶನಕ್ಕೆ ಭಕ್ತಸಾಗರ

ಪಂಢರಪುರದಲ್ಲಿ ಶ್ರದ್ಧಾಭಕ್ತಿಯ ಆಷಾಢ ಏಕಾದಶಿ

​ಪ್ರಜಾವಾಣಿ ವಾರ್ತೆ
Published 4 ಜುಲೈ 2017, 19:30 IST
Last Updated 4 ಜುಲೈ 2017, 19:30 IST
ಪಾಂಡುರಂಗ ವಿಠ್ಠಲನ ದರ್ಶನಕ್ಕೆ ಮುನ್ನ ಚಂದ್ರಭಾಗ ನದಿಯಲ್ಲಿ ಪುಣ್ಯಸ್ನಾನ ಮಾಡಿದ ಭಕ್ತ ಸಮೂಹ
ಪಾಂಡುರಂಗ ವಿಠ್ಠಲನ ದರ್ಶನಕ್ಕೆ ಮುನ್ನ ಚಂದ್ರಭಾಗ ನದಿಯಲ್ಲಿ ಪುಣ್ಯಸ್ನಾನ ಮಾಡಿದ ಭಕ್ತ ಸಮೂಹ   

ವಿಜಯಪುರ: ಆಷಾಢ ಏಕಾದಶಿಯಾದ ಮಂಗಳವಾರ ಅಪಾರ ಸಂಖ್ಯೆಯ ಭಕ್ತರು ಪಂಢರಪುರದ ಪಾಂಡುರಂಗ ವಿಠ್ಠಲನ ದರ್ಶನ ಪಡೆದರು. ಅದಕ್ಕಾಗಿಯೇ ಸೋಮವಾರ ರಾತ್ರಿಯಿಂದಲೇ ಭಕ್ತಸಮೂಹ  ಸರದಿ ಸಾಲಿನಲ್ಲಿ ನಿಂತಿತ್ತು.

ಮಂಗಳವಾರದ ನಸುಕಿನಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಪಢಣವೀಸ್‌ ಅವರು ಪತ್ನಿ ಅಮೃತಾ ಜತೆ ಸತತ ಮೂರನೇ ವರ್ಷ ಪಾಂಡುರಂಗ ವಿಠ್ಠಲನಿಗೆ ಮೊದಲ ಪೂಜೆ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ, ವಿಠ್ಠಲನ ದರ್ಶನಕ್ಕೆ ಕಾಲ್ನಡಿಗೆಯಲ್ಲಿ ಬಂದ ವಾರಕರಿ ದಂಪತಿ ಬುಲ್ಡಾನಾ ಜಿಲ್ಲೆಯ ಸಿಂಧ್‌ಖೇಡ ತಾಲ್ಲೂಕಿನ ಬಾಲಸಮುದ್ರ ಗ್ರಾಮದ ಪರಶುರಾಮ ಉತ್ತಮರಾವ್ ಮೇರತ್‌– ಅನಸೂಯಾ ಪರಶುರಾಮ ಮೇರತ್ ಸಹ ದೇಗುಲದ ಸಂಪ್ರದಾಯದಂತೆ ಮೊದಲ ಪೂಜೆಯಲ್ಲಿ ಮುಖ್ಯಮಂತ್ರಿ ದಂಪತಿ ಜತೆ ವಿಠ್ಠಲನಿಗೆ ಪೂಜೆ ಸಲ್ಲಿಸಿದರು.

ADVERTISEMENT

ಪೂಜೆಯ ಬಳಿಕ ಮಾತನಾಡಿದ ಪಢಣವೀಸ್‌, ‘ಪಾಂಡುರಂಗನಲ್ಲಿ ಈ ಹಿಂದಿನ ವರ್ಷ ಉತ್ತಮ ಮಳೆಗಾಗಿ ಪ್ರಾರ್ಥಿಸಿದ್ದೆ. ಈ ಬಾರಿ ‘ರೈತರು ಸಾಲಮುಕ್ತರಾಗಲಿ. ಎಲ್ಲೆಡೆ ಉತ್ತಮ ಮಳೆ– ಬೆಳೆಯಾಗಲಿ ಎಂದು ಬೇಡಿಕೊಂಡೆ’ ಎಂದರು. ಚಂದ್ರಭಾಗಾ ನದಿಯಲ್ಲಿ ಪುಣ್ಯ ಸ್ನಾನ ಮಾಡಿದ ಭಕ್ತರು ದರ್ಶನಕ್ಕಾಗಿ ಮೈಲುದ್ದದ ಸರತಿಯಲ್ಲಿ ಕಾದು ನಿಂತಿದ್ದರು. ರಾಜ್ಯವೂ ಸೇರಿದಂತೆ ಆಂಧ್ರ ಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ಬಿಹಾರ, ಗುಜರಾತ್ ಸೇರಿದಂತೆ ವಿವಿಧ ರಾಜ್ಯಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಬಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.