ADVERTISEMENT

ಪುಟಗೋಸಿ ಪಕ್ಷಕ್ಕೆ ಕಾಂಗ್ರೆಸ್ ಸಲಾಂ: ಹೆಗಡೆ ಲೇವಡಿ

ಜೆಡಿಎಸ್‌ ಹೆಸರಿಸದೇ ಟೀಕಿಸಿದ ಕೇಂದ್ರ ಸಚಿವ ಹೆಗಡೆ

​ಪ್ರಜಾವಾಣಿ ವಾರ್ತೆ
Published 2 ಜೂನ್ 2018, 19:30 IST
Last Updated 2 ಜೂನ್ 2018, 19:30 IST
ಅನಂತಕುಮಾರ ಹೆಗ್ಡೆ
ಅನಂತಕುಮಾರ ಹೆಗ್ಡೆ   

ಕುಮಟಾ (ಉತ್ತರ ಕನ್ನಡ): ‘ದೇಶದಲ್ಲಿಯೇ ಅತಿದೊಡ್ಡ ರಾಜಕೀಯ ಪಕ್ಷ ಎನಿಸಿಕೊಂಡ ಕಾಂಗ್ರೆಸ್, ಯಾವುದೋ ಉದ್ದೇಶ ಸಾಧಿಸಲು ಕರ್ನಾಟಕ ದಲ್ಲಿ ಪುಟಗೋಸಿ ರಾಜಕೀಯ ಪಕ್ಷವೊಂದಕ್ಕೆ ಸಲಾಂ ಹೊಡೆಯುವಂಥ ದಯನೀಯ ಸ್ಥಿತಿಯನ್ನು ತಂದುಕೊಂಡಿತು’ ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ, ಜೆಡಿಎಸ್ ಪಕ್ಷವನ್ನು ಹೆಸರಿಸದೇ ಶನಿವಾರ ಇಲ್ಲಿ ಟೀಕಿಸಿದರು.

ಜಿಲ್ಲೆಯ ಬಿಜೆಪಿ ಶಾಸಕರಿಗೆ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ‘ಇನ್ನು ಮುಂದೆ ದೇಶದಲ್ಲಿ ಬಿಜೆಪಿ ಬೆಳವಣಿಗೆ ಹೇಗೆ ಆಗುತ್ತದೆ ಎಂದರೆ ಕಾಂಗ್ರೆಸ್‌ಗೆ ಚುನಾವಣೆಗಳಲ್ಲಿ ಗೆಲ್ಲುವ ವಿಶ್ವಾಸವೇ ಹೊರಟು ಹೋಗಲಿದೆ’ ಎಂದರು.

‘ಹಳಿಯಾಳ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಬಾವುಟ ಹಾರಿಸುವವರೆಗೂ ರಾಜಕೀಯ ಬಿಡಲಾರೆ. ಈ ಸಲದ ಚುನಾವಣೆಯಲ್ಲಿ ಜನರಿಗೆ ಪಕ್ಷದ ಬಗ್ಗೆ ಪ್ರೀತಿ ಇತ್ತು. ಆದರೆ, ಸರಿಯಾಗಿ ಅವರನ್ನು ತಲುಪಲಾಗಲಿಲ್ಲ. ಹೀಗಾಗಿ, ಜಿಲ್ಲೆಯಲ್ಲಿ ನಾಲ್ಕು ಸ್ಥಾನಗಳನ್ನು ಮಾತ್ರ ಗೆಲ್ಲಲು ಸಾಧ್ಯವಾಯಿತು. ಮುಂದಿನ ಚುನಾಣೆಯಲ್ಲಿ ಎಲ್ಲ ಆರೂ ಸ್ಥಾನಗಳು ಬಿಜೆಪಿ ತೆಕ್ಕೆಗೆ ಬರಲಿವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.