ADVERTISEMENT

ಪುಸ್ತಕ ಸರಬರಾಜು: ಕಾಲಾವಕಾಶ ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2014, 19:30 IST
Last Updated 18 ಮಾರ್ಚ್ 2014, 19:30 IST

ಬೆಂಗಳೂರು: ಸಾರ್ವಜನಿಕ ಗ್ರಂಥಾ­ಲಯ­ಗಳ ಇಲಾಖೆಗೆ ಪುಸ್ತಕಗಳನ್ನು ಸರ­ಬ­­ರಾಜು ಮಾಡಲು ಪ್ರಕಾಶಕರಿಗೆ
ನೀಡಿ­­ರುವ ಕಾಲಾವಕಾಶವನ್ನು ವಿಸ್ತರಿ­ಸುವ ಸಾಧ್ಯತೆ ಇದೆ.

ರಾಜ್ಯ ಸರ್ಕಾರದ ಏಕಗವಾಕ್ಷಿ ಯೋಜನೆ ಅಡಿ ಪುಸ್ತಕ ಸರಬರಾಜಿಗೆ ನೀಡಿ­ರುವ ಕೊನೆಯ ದಿನಾಂಕವನ್ನು
ಮಾ.22ಕ್ಕೆ ರಾಜಾರಾಂ ಮೋಹನ್‌ ರಾಯ್‌ ಫೌಂಡೇಷನ್‌ (ಆರ್‌ಆರ್‌­ಎಲ್‌­ಎಫ್‌) ಯೋಜನೆ ಅಡಿ ಪುಸ್ತಕ ಸರಬ­ರಾಜು ಮಾಡುವವರಿಗೆ ಮಾರ್ಚ್. 25­ರ ವರೆಗೆ ಕಾಲಾವಕಾಶ ವಿಸ್ತ­ರಿಸಿ ಅವಕಾಶ ಕಲ್ಪಿ­ಸ­ಲಾಗುವುದು ಎಂದು ಇಲಾಖೆಯ
ನಿರ್ದೇ­­­­­­­­­ಶಕ ಎಂ.ಎಂ.ಬಡ್ನಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.