
ಪ್ರಜಾವಾಣಿ ವಾರ್ತೆಬೆಂಗಳೂರು: ಕೇಂದ್ರ ಸರ್ಕಾರ ತೈಲ ಬೆಲೆ ಏರಿಕೆ ಮಾಡಿರುವುದರಿಂದ ನಗರದಲ್ಲೂ ಶನಿವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬರುವಂತೆ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ ರೂ. 2.42 ಹೆಚ್ಚಳವಾಗಿದೆ.
ನಗರದ ಒಳ ಭಾಗದ ಬಂಕ್‌ಗಳಲ್ಲಿ ಈ ಹಿಂದೆ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ರೂ. 70.54 ಇತ್ತು. ಇದೀಗ ಬೆಲೆ ಏರಿಕೆಯಿಂದ ಪರಿಷ್ಕೃತ ದರ ರೂ. 72.96 ಆಗಿದೆ. ನಗರದ ಹೊರ ಭಾಗದ ಬಂಕ್‌ಗಳಲ್ಲಿ ರೂ. 69.99 ಇದ್ದ ಲೀಟರ್ ಪೆಟ್ರೋಲ್ ದರ, ಈಗ ರೂ. 72.41ಕ್ಕೆ ಏರಿಕೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.