ADVERTISEMENT

ಪೊಲೀಸ್‌ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ

ವೃತ್ತಿಯಲ್ಲಿ ಗಣನೀಯ ಸಾಧನೆ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2014, 19:30 IST
Last Updated 14 ಆಗಸ್ಟ್ 2014, 19:30 IST
ಪೊಲೀಸ್‌ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ
ಪೊಲೀಸ್‌ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ   

ಬೆಂಗಳೂರು: ವೃತ್ತಿ ಜೀವನದಲ್ಲಿ ಗಣನೀಯ ಸಾಧನೆ ತೋರಿದ ರಾಜ್ಯ ಪೊಲೀಸ್ ಇಲಾಖೆಯ  20 ಅಧಿಕಾರಿಗಳು ಹಾಗೂ ಸಿಬ್ಬಂದಿಗೆ 2014ನೇ ಸಾಲಿನ ರಾಷ್ಟ್ರಪತಿ ಪದಕ ಲಭಿಸಿದೆ.

ವಿಶೇಷ ಪ್ರಶಸ್ತಿ: ಆಡಳಿತ ವಿಭಾಗದ ಐಜಿಪಿ ಕಮಲ್‌ಪಂತ್, ಪೂರ್ವ ವಲಯದ ಐಜಿಪಿ ಡಾ.ಎಸ್. ಪರಶಿವಮೂರ್ತಿ ಹಾಗೂ ರಾಜ್ಯ ಗುಪ್ತದಳದ ಡಿಐಜಿ  ಬಿ.ಎ.ಪದ್ಮನಯನ ಅವರು ರಾಷ್ಟ್ರಪತಿಗಳ ವಿಶೇಷ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. 

ಶ್ಲಾಘನೀಯ ಪ್ರಶಸ್ತಿ: ಬೆಂಗಳೂರು ಪಶ್ಚಿಮ ವಿಭಾಗದ ಜಂಟಿ ಪೊಲೀಸ್ ಕಮಿಷನರ್ ಎಸ್‌.ರವಿ, ರಾಜ್ಯ ಗುಪ್ತದಳದ ಪೊಲೀಸ್ ವರಿಷ್ಠಾಧಿಕಾರಿ ಸದಾನಂದ ಎಸ್‌.ನಾಯಕ್, ನೆಲಮಂಗಲ ಉಪವಿಭಾಗದ ಡಿವೈಎಸ್‌ಪಿ  ವಿ.ಶ್ರೀಧರ್, ಬಳ್ಳಾರಿ ಉಪವಿಭಾಗದ ಡಿವೈಎಸ್‌ಪಿ ಟಿ.ಎಸ್.­ಮುರುಗಣ್ಣವರ್, ಸಿಐಡಿ ಅರಣ್ಯ ಘಟಕದ ಡಿವೈಎಸ್‌ಪಿ ಬಿ.ಎನ್.­ಶಾಮಣ್ಣ, ಸಿಐಡಿ ಡಿವೈಎಸ್‌ಪಿ ವೈ.ನಾಗರಾಜ್, ಕೆಎಸ್‌ಆರ್‌ಪಿ ಸಹಾ­ಯಕ ಕಮಾಂಡಂಟ್ ಡಿ.ಶಿವಾನಂದಪ್ಪ, ರಾಜ್ಯಗುಪ್ತ ದಳದ ಇನ್‌ಸ್ಪೆಕ್ಟರ್ ಕೆ.ರಾಮಚಂದ್ರನ್‌, ಚಿಕ್ಕಮಗಳೂರಿನ ಬಸವನಹಳ್ಳಿ ಠಾಣೆಯ ಎಸ್‌ಐ ಎ.ಎಂ.ಮೋಹನ್‌ರಾವ್‌ ಅವರಿಗೆ ಶ್ಲಾಘನೀಯ ಪ್ರಶಸ್ತಿ ಲಭಿಸಿದೆ.

ಅದೇ ರೀತಿ ವಾಡಿ ಠಾಣೆಯ ಎಎಸ್‌ಐ ಜಿ.ಟಿ.ಶಿವಶರಣಪ್ಪ, ಮೈಸೂರು ನಗರ ಸಶಸ್ತ್ರ ಮೀಸಲು ಪಡೆಯ ಎಆರ್ಎಸ್‌ಐ  ಎಂ.ಎಸ್.ಸುಬ್ಬಣ್ಣ, ಆರ್‌.ಟಿ.ನಗರ ಠಾಣೆ ಹೆಡ್‌ಕಾನ್‌ಸ್ಟೆಬಲ್ ಅಜೀಂ ಅಹಮದ್‌, ಸಿಐಡಿ ಅರಣ್ಯ ಘಟಕದ ಹೆಡ್‌ಕಾನ್‌ಸ್ಟೆಬಲ್ ಆರ್‌.ರಾಮಕೃಷ್ಣ, ಭದ್ರಾವತಿ ಗ್ರಾಮೀಣ ಠಾಣೆಯ ಹೆಡ್‌ಕಾನ್‌ಸ್ಟೆಬಲ್ ದನಮ್, ಚಿಕ್ಕಮಗಳೂರು ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಹೆಡ್‌ ಕಾನ್‌ಸ್ಟೆಬಲ್ ಕೆ.ಪಿ.ದೇವರಾಜೇಗೌಡ, ಕೆಎಸ್‌ಆರ್‌ಪಿ ಮೂರನೇ ಬೆಟಾಲಿಯನ್‌ನ ಹೆಡ್‌ ಕಾನ್‌ಸ್ಟೆಬಲ್ ಡಿ.ಎಂ.ಚೌಡೇಗೌಡ ಹಾಗೂ ಏಳನೇ ಬೆಟಾಲಿಯನ್‌ನ ಎಸ್‌.ಸುಂದರ್ ಶೆಟ್ಟಿ ಅವರಿಗೂ ಈ ಪ್ರಶಸ್ತಿ ದೊರೆತಿದೆ.

ಗುಲ್ಬರ್ಗ ಕೇಂದ್ರ ಕಾರಾಗೃಹದ ಅಧೀಕ್ಷಕ ಡಾ.ಬಿ.ಮಲ್ಲಿಕಾರ್ಜುನ್ ಅವರಿಗೆ ಸೇವಾ ಸುಧಾರಣ ಪದಕ ದೊರೆತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT