ADVERTISEMENT

`ಪ್ರಗತಿಪರ ಸಮಾಜಕ್ಕೆ ಬಸವ ತತ್ವ ಸಹಕಾರಿ'

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2013, 19:59 IST
Last Updated 14 ಫೆಬ್ರುವರಿ 2013, 19:59 IST
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಬಸವ ಸಮಿತಿಯ ಸಹಯೋಗದೊಂದಿಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಬಿ.ಡಿ.ಜತ್ತಿ ಅವರ ಜನ್ಮಶತಮಾನೋತ್ಸವ ಸಮಾರಂಭದಲ್ಲಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರು ಬಹುಭಾಷಾ ವಚನ ಸಂಪುಟಗಳನ್ನು ಬಿಡುಗಡೆಮಾಡಿದರು. ಸಮಿತಿಯ ಅಧ್ಯಕ್ಷ ಅರವಿಂದ ಜತ್ತಿ, ಹಿರಿಯ ವಿದ್ವಾಂಸ ಡಾ.ಎಂ.ಎಂ.ಕಲ್ಬುರ್ಗಿ, ಸಚಿವ ಗೋವಿಂದ ಎಂ.ಕಾರಜೋಳ, ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಚಿತ್ರದಲ್ಲಿದ್ದಾರೆ

ಬೆಂಗಳೂರು: ವಚನಗಳ ಸಾರವನ್ನು ಜಗತ್ತಿಗೆ ಸಾದರಪಡಿಸಲು ವಚನ ಸಂಪುಟವನ್ನು ಕನ್ನಡ, ಇಂಗ್ಲಿಷ್, ಹಿಂದಿ, ತಮಿಳು, ತೆಲುಗು, ಮರಾಠಿ, ಪಂಜಾಬಿ, ಬೆಂಗಾಲಿ, ಸಂಸ್ಕೃತ, ಉರ್ದು ಸೇರಿದಂತೆ ಹತ್ತು ಭಾಷೆಗಳಿಗೆ ಅನುವಾದ ಮಾಡಲಾಗಿದೆ.
ಈ ವಚನ ಸಂಪುಟವನ್ನು ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರು ಗುರುವಾರ ಬಿಡುಗಡೆ ಮಾಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಬಸವ ಸಮಿತಿಯ ಸಹಯೋಗದೊಂದಿಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಗುರುವಾರ ನಡೆದ ಬಿ.ಡಿ.ಜತ್ತಿ ಅವರ ಶತಮಾನೋತ್ಸವ ಸಮಾರಂಭದಲ್ಲಿ ವಚನ ಸಂಪುಟ ಬಿಡುಗಡೆ ಮಾಡಿ ಮಾತನಾಡಿದ ಅವರು, `ಸಾಮಾಜಿಕ ಪ್ರಜ್ಞೆ ಮತ್ತು ಸರ್ವಧರ್ಮ ಸಮನ್ವಯದ ಮೂಲಕ ಜಾಗತಿಕ ಸಂದೇಶವನ್ನು ನೀಡಿದ ಬಸವಣ್ಣನ ತತ್ವಗಳು ಪ್ರಗತಿಪರ ಸಮಾಜವನ್ನು ಮುನ್ನಡೆಸಲು ಸಹಕಾರಿ' ಎಂದು ಅಭಿಪ್ರಾಯಪಟ್ಟರು.

`ಸಮಾಜದಲ್ಲಿ ಬೇರೂರಿದ್ದ ಅಸಮಾನತೆ, ಅಸ್ಪೃಶ್ಯತೆಗೆ ವಚನದ ಮೂಲಕ ಚಿಕಿತ್ಸೆ ನೀಡಲು ಬಯಸಿದ್ದ ಬಸವಣ್ಣ, ಈ ನೆಲ ಕಂಡ ಬಹುದೊಡ್ಡ ಸಮಾಜ ಸುಧಾರಕರು. ಎಲ್ಲ ಜಾತಿ ಮತ್ತು ವರ್ಗದವರನ್ನು ಒಟ್ಟುಗೂಡಿಸಿ ಅನುಭವ ಮಂಟಪದ ಮೂಲಕ ಜಾತ್ಯತೀತ ಮನೋಭಾವವನ್ನು ಮೆರೆದವರು' ಎಂದು ಶ್ಲಾಘಿಸಿದರು.

ಸಚಿವ ಗೋವಿಂದ ಎಂ. ಕಾರಜೋಳ, ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಮಾತನಾಡಿದರು. ಈ ವಚನ ಸಂಪುಟದಲ್ಲಿ 173 ಶರಣರ ಒಟ್ಟು 2,500 ವಚನಗಳಿವೆ.  ವಚನ ಸಂಪುಟದ ಬಹುಭಾಷಾ ಪ್ರಕಟಣೆಯ ಯೋಜನಾ ನಿರ್ದೇಶಕರಾದ ಹಿರಿಯ ವಿದ್ವಾಂಸ ಡಾ.ಎಂ.ಎಂ. ಕಲ್ಬುರ್ಗಿ, ಬಸವ ಸಮಿತಿಯ ಅಧ್ಯಕ್ಷ ಅರವಿಂದ ಜತ್ತಿ, ಇಲಾಖೆಯ ಪ್ರಧಾನ ಕಾರ್ಯದರ್ಶಿ ಬಸವರಾಜು  ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.